ಸಂಕಷ್ಟದ ಸಮಯದಲ್ಲಿ ಇಸ್ರೇಲ್ ಬೆಂಬಲಿಸಿದವರಿಗೆ 'ಫೌಡಾ' ಖ್ಯಾತಿಯ ನಟಿ ರೋನಾ ಲೀ ಧನ್ಯವಾದ- ವಿಡಿಯೋ - ಇಸ್ರೇಲ್ ನಟಿ ರೋನಾ ಲೀ
🎬 Watch Now: Feature Video
Published : Oct 16, 2023, 7:26 PM IST
ಟಿವಿ ಸಿರೀಸ್ 'ಫೌಡಾ'ದ ಅಭಿನಯದಿಂದಾಗಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಇಸ್ರೇಲ್ ನಟಿ ರೋನಾ- ಲೀ ಶಿಮೊನ್ ಅವರು ಹಮಾಸ್ ಭಯೋತ್ಪಾದಕರಿಂದ ದಾಳಿಗೊಳಗಾದ ತನ್ನ ದೇಶದ ಬೆಂಬಲಕ್ಕೆ ಬಂದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಟಿ, "ದಾಳಿಯಲ್ಲಿ ಬದುಕುಳಿದವರನ್ನು ಹಮಾಸ್ ಒತ್ತೆಯಾಳಾಗಿಟ್ಟುಕೊಂಡಿದ್ದು, ಮರಳಿ ಕರೆತರುವ ಕಾರಣವನ್ನು ಇಸ್ರೇಲ್ನ ಪ್ರತಿಯೊಬ್ಬ ನಾಗರಿಕರೂ ಬೆಂಬಲಿಸುತ್ತಿದ್ದಾರೆ. ಅವರನ್ನು ಮರಳಿ ಪಡೆಯಲು ನಾವು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಎಂಟು ದಿನಗಳ ಹಿಂದೆ ನಾನು ಕಂಡಿದ್ದು ಅತ್ಯಂತ ಘೋರ ಘಟನೆ. ನಾವು ನಮ್ಮ ಸೇನೆಗೆ ಸಹಾಯ ಮಾಡುತ್ತಿದ್ದೇವೆ" ಎಂದರು.
ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ಹಮಾಸ್ ಉಗ್ರರ ನಡುವಿನ ಯುದ್ಧ 10ನೇ ದಿನಕ್ಕೆ ಕಾಲಿಟ್ಟಿದೆ. ಲೆಬನಾನ್ ಗಡಿಯ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ 28 ಸಮುದಾಯಗಳ ನಿವಾಸಿಗಳನ್ನು ಸ್ಥಳಾಂತರಿಸುವ ಯೋಜನೆ ನಡೆಯುತ್ತಿದೆ. ನಿನ್ನೆ ಸಣ್ಣ ಯುದ್ಧ ವಿರಾಮ ಘೋಷಿಸಿದ್ದ ಇಸ್ರೇಲ್, ಗಾಜಾ ಪಟ್ಟಿಯನ್ನು ತೊರೆಯಲು ಜನರಿಗೆ ಅವಕಾಶ ನೀಡಿತ್ತು. ಇದೇ ವೇಳೆ ಲೆಬನಾನ್ನಿಂದಲೂ ಹಿಜ್ಬುಲ್ಲಾ ಉಗ್ರರು ಇಸ್ರೇಲ್ ಮೇಲೆ ದಾಳಿ ಆರಂಭಿಸಿದ್ದರು.
ಇದನ್ನೂ ಓದಿ: ಯುದ್ಧ ದಿನ-9: ಗಾಜಾದಲ್ಲಿ ನಾಗರಿಕರ ಸ್ಥಳಾಂತರಕ್ಕೆ 3 ತಾಸು ಕದನ ವಿರಾಮ ನೀಡಿದ ಇಸ್ರೇಲ್