ಕೃಷಿ ವಿವಿ ಸಹಾಯಕ ಪ್ರಾಧ್ಯಾಪಕ ಇಸ್ರೇಲ್‌ನಲ್ಲಿ ಸೇಫ್, ಶೀಘ್ರವೇ ವಾಪಸ್: ಕುಲಪತಿ ಡಾ.ಪಿ.ಎಲ್.ಪಾಟೀಲ - ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ
🎬 Watch Now: Feature Video
Published : Oct 10, 2023, 5:21 PM IST
ಧಾರವಾಡ: ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಸುಮೇಶ ಅವರು ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಆಗಸ್ಟ್ 7ರಿಂದ ಅಕ್ಟೋಬರ್ 22ರ ವರೆಗಿನ ತರಬೇತಿಯಲ್ಲಿ ಭಾಗವಹಿಸಲು ಇಸ್ರೇಲ್ಗೆ ತೆರಳಿದ್ದರು. ಆದರೆ ಇತ್ತೀಚೆಗೆ ಹಮಾಸ್ ಉಗ್ರರ ದಾಳಿಯಿಂದಾಗಿ ಇಸ್ರೇಲ್‌ನಲ್ಲಿ ಯುದ್ಧ ಪರಿಸ್ಥಿತಿ ನಿಮಾರ್ಣವಾಗಿದ್ದು, ಡಾ.ಸುಮೇಶ ಅಲ್ಲಿ ಸಿಲುಕಿದ್ದಾರೆ. ಇವರನ್ನು ಸ್ವದೇಶಕ್ಕೆ ಕರೆತರುವ ವಿಚಾರವಾಗಿ ಕೃಷಿ ವಿವಿ ಕುಲಪತಿ ಡಾ.ಪಿ.ಎಲ್.ಪಾಟೀಲ ಪ್ರತಿಕ್ರಿಯಿಸಿದರು.
"ನಮ್ಮ ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಸುಮೇಶ ಇಸ್ರೇಲ್‌ನಲ್ಲಿ ಸಿಲುಕಿದ್ದಾರೆ. ಅವರು ವಿಜಯಪುರ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 7 ರಿಂದ ಅ.22ರ ವರೆಗೆ ಇದ್ದ ತರಬೇತಿ ಸಲುವಾಗಿ ತೆರಳಿದ್ದರು. ಅಲ್ಲಿ ಯುದ್ಧ ಶುರುವಾಗಿದೆ. ಹೀಗಾಗಿ ನಿನ್ನೆಯಿಂದ ಅವರ ಸಂಪರ್ಕದಲ್ಲಿದ್ದೇವೆ. NAHEPRDP ಯೋಜನೆ ಅಡಿ ಅವರು ತೆರಳಿದ್ದು ಯೋಜನಾ ಅಧಿಕಾರಿಗಳು ಮತ್ತು ನಾವು ಅವರ ಸಂಪರ್ಕದಲ್ಲಿದ್ದೇವೆ. ಒಂದು ವಾರಕ್ಕೆ ಆಗುವಷ್ಟು ಆಹಾರ, ನೀರು ಇಟ್ಟುಕೊಂಡಿದ್ದಾರೆ. ಆದಷ್ಟು ಬೇಗ ಅವರನ್ನು ಕರೆತರಲಾಗುವುದು" ಎಂದರು.
"ದೆಹಲಿಯ ಐಸಿಆರ್ ಡೆಪ್ಯೂಟಿ ಡೈರೆಕ್ಟರ್ ಜನರಲ್ ಅವರಿಗೂ ಈ ವಿಚಾರವನ್ನು ತಿಳಿಸಿದ್ದೇವೆ. ಇಸ್ರೆಲ್‌ನ ರಾಯಭಾರಿಗಳಿಗೂ ಪತ್ರ ಬರೆಯಲಾಗಿದೆ. ಆದಷ್ಟು ಬೇಗ ಭಾರತಕ್ಕೆ ಕಳುಹಿಸಲು ವ್ಯವಸ್ಥೆ ಮಾಡುತ್ತಿದ್ದಾರೆ. ಎರಡು ದಿನದಲ್ಲಿ ಅವರು ಸುರಕ್ಷಿತವಾಗಿ ಬರಲಿದ್ದಾರೆ" ಎಂದು ತಿಳಿಸಿದರು.
ಇದನ್ನೂ ಓದಿ: Israel- Hamas War: ಇಸ್ರೇಲ್‌ನಲ್ಲಿ ಸಿಲುಕಿರುವ ಕೃಷಿ ವಿವಿಯ ಸಹಾಯಕ ಪ್ರಾಧ್ಯಾಪಕ, ಕೋಲಾರ ಮೂಲದ ಹೋಂ ನರ್ಸ್