ಜನರಿಗೆ ಮಾತನಾಡುವ ಸ್ವಾತಂತ್ರ್ಯವೂ ಇಲ್ಲವೇ? ತುರ್ತು ಪರಿಸ್ಥಿತಿ ಇದೆಯೇ?: ಸಂಸದ ಸಂಗಣ್ಣ ಕರಡಿ - ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಇದೆಯಾ

🎬 Watch Now: Feature Video

thumbnail

By

Published : Jun 6, 2023, 8:17 PM IST

ಕೊಪ್ಪಳ: ''ರಾಜ್ಯದ ಜನರಿಗೆ ಮಾತನಾಡುವ ಸ್ವಾತಂತ್ರ್ಯವೂ ಇಲ್ಲವಾ? ರಾಜ್ಯದಲ್ಲಿ ಏನ್​ ಎಮರ್ಜನ್ಸಿ ಇದೆಯಾ?'' ಎಂದು ಸಂಸದ ಸಂಗಣ್ಣ ಕರಡಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಇಂದು ವಿದ್ಯುತ್ ದರ ಏರಿಕೆ, ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಲು ಮುಂದಾಗಿರುವ ರಾಜ್ಯ ಸರಕಾರದ ವಿರುದ್ಧ ಕೊಪ್ಪಳ ಜಿಲ್ಲಾ ಬಿಜೆಪಿ ಕಾರ್ಯಕರ್ತರಿಂದ ನಡೆದ ಪ್ರತಿಭಟನೆ ವೇಳೆ ಅವರು ಮಾತನಾಡಿದರು.

''ಚಕ್ರವರ್ತಿ ಸೂಲಿಬೆಲೆ ಅವರನ್ನು ಜೈಲಿಗೆ ಹಾಕುತ್ತೇನೆ ಎಂದು ಹೇಳಿಕೆ ನೀಡಿದ ಎಂ.ಬಿ‌. ಪಾಟೀಲ್ ಅವರೇನು ಗೃಹ ಮಂತ್ರಿಗಳಾ? ಸಚಿವ ಎಂ.ಬಿ. ಪಾಟೀಲ ಸೇರಿದಂತೆ ಹಲವರು ಉದ್ಧಟತನದಿಂದ ಮಾತನಾಡುತ್ತಿದ್ದಾರೆ. ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ, ದಬ್ಬಾಳಿಕೆ ಮಾಡುತ್ತಿದ್ದಾರೆ. ಹಿಂದಿನ ಸರಕಾರದ ಹಗರಣಗಳನ್ನು ತನಿಖೆ ಮಾಡುತ್ತೇವೆ ಎನ್ನುತ್ತಾರೆ. ತನಿಖೆ‌ ಮಾಡಲಿ, ನಮ್ಮದೇನೂ ವಿರೋಧವಿಲ್ಲ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಹ ತನಿಖೆ ಮಾಡಲಿ ಎಂದಿದ್ದಾರೆ. ಆದರೆ, ಇವೆಲ್ಲಕ್ಕಿಂತ ಮೊದಲು ಇವರು ಜನರಿಗೆ ಏನು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೋ ಆ ಸೌಲಭ್ಯಗಳನ್ನು ನೀಡಲಿ'' ಎಂದರು.

ಗೋ ಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತ್ರಿಕ್ರಿಯಿಸಿದ ಅವರು, ''ಗೋವುಗಳ ಬಗ್ಗೆ ಜನರಲ್ಲಿ ಪೂಜನೀಯ ಭಾವನೆ ಇದೆ. ಗೋ ಮೂತ್ರ ಕೃಷಿಕರ ಭೂಮಿಗೆ ಬೇಕು. ಗೋವುಗಳ ಉತ್ಪನ್ನಗಳು ಶ್ರೇಷ್ಠ. ಗೋವು ಸಾಕಾಣಿಕೆಗೆ ಉತ್ತೇಜನ ನೀಡಬೇಕು. ಆದರೆ, ವಯಸ್ಸಾದ ಗೋವುಗಳನ್ನು ಕಡಿಯುತ್ತೇವೆ ಎನ್ನುತ್ತಾರೆ. ಕಾನೂನಿನ ಅರುವವರು ಈ ರೀತಿ ಮಾತನಾಡಬಾರದು'' ಎಂದು ಹೇಳಿದರು.

ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಈ ಮೂವರಲ್ಲಿ ಒಬ್ಬರು ಸಿಎಂ: ಭವಿಷ್ಯ ನುಡಿದ ಶಾಸಕ ಪ್ರದೀಪ್ ಈಶ್ವರ್

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.