ಮರಾಠ್‌ಮೋಲಾ ಖಾದ್ಯಕ್ಕೆ ಮನಸೋತ ರಾಷ್ಟ್ರಪತಿ: ರಾಷ್ಟ್ರಪತಿ ಭವನದಲ್ಲಿ ಅಡುಗೆ ಮಾಡಲು ಶಿರಡಿಯ ಇಬ್ಬರು ಬಾಣಸಿಗರಿಗೆ ಆಹ್ವಾನ - etv bharat kannda

🎬 Watch Now: Feature Video

thumbnail

By

Published : Jul 28, 2023, 10:22 PM IST

ಶಿರಡಿ(ಮಹಾರಾಷ್ಟ್ರ): ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳಿಗೆ ವಿಶೇಷ ಅಡುಗೆ ಮಾಡಲು ಶಿರಡಿಯ ಇಬ್ಬರು ಬಾಣಸಿಗರಿಗೆ ಆಹ್ವಾನ ಬಂದಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜು. 7 ರಂದು ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಅವರು ಸಾಯಿಬಾಬಾ ಸಂಸ್ಥಾನದ ಸಾಯಿ ಪ್ರಸಾದಾಲಯದಲ್ಲಿ ಪ್ರಸಾದ ಸವಿದಿದ್ದರು. ಅಂದು ಸಾಯಿಬಾಬಾ ಸಂಸ್ಥಾನದ ಇಬ್ಬರು ಬಾಣಸಿಗರಿಂದ ರಾಷ್ಟ್ರಪತಿಗಳಿಗೆ ವಿಶೇಷ ಭೋಜನವನ್ನು ಏರ್ಪಡಿಸಲಾಗಿತ್ತು. ಸದ್ಯ ಈ ಇಬ್ಬರೂ ಬಾಣಸಿಗರಿಗೆ ರಾಷ್ಟ್ರಪತಿ ಭವನದಿಂದ ಇಂದು ಅಡುಗೆ ಮಾಡವಂತೆ ಕೋರಿ ಆಹ್ವಾನ ಬಂದಿದೆ.  ಹೀಗಾಗಿ ಇಬ್ಬರು ಬಾಣಸಿಗರು ದೆಹಲಿಗೆ ಪ್ರಯಣ ಬೆಳೆಸಲಿದ್ದಾರೆ.

ಈ ಇಬ್ಬರು ಬಾಣಸಿಗರು ರಾಷ್ಟ್ರಪತಿಗಳು ಭೇಟಿ ನೀಡಿದ್ದಾಗ ತುಂಬಾ ರುಚಿಕರವಾದ ಮರಾಠ್‌ಮೋಲಾ ಮತ್ತು ಕಡಲೆಕಾಯಿ ಚಟ್ನಿ ಖಾದ್ಯಗಳನ್ನು ತಯಾರಿಸಿದ್ದರು. ಮರಾಠಿ ಖಾದ್ಯದ ರುಚಿ ಸವಿದಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.  ರಾಷ್ಟ್ರಪತಿ ಭವನದ ಅಧಿಕಾರಿಯೊಬ್ಬರು ನೇರವಾಗಿ ಸಾಯಿಬಾಬಾ ಸಂಸ್ಥಾನದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಇಬ್ಬರೂ ಬಾಣಸಿಗರನ್ನು ದೆಹಲಿಗೆ ಕಳುಹಿಸಿಕೊಡುವಂತೆ ಆಹ್ವಾನ ನೀಡಿದ್ದಾರೆ. 

ಇವರಿಬ್ಬರನ್ನೂ  ಶನಿವಾರ ರಾಷ್ಟ್ರಪತಿ ಭವನಕ್ಕೆ ಮರಾಠ್‌ಮೋಲಾ ಆಹಾರ ತಯಾರಿಸಲು ಕಳುಹಿಸಲಾಗುವುದು. ಹೀಗಾಗಿ ರಾಷ್ಟ್ರಪತಿ ಭವನ ಬಾಣಸಿಗರಿಗೆ ವಿಮಾನದ ಟಿಕೆಟ್‌ಗಳನ್ನು ಕಾಯ್ದಿರಿಸಿದೆ. ಇಬ್ಬರೂ ಜು.29ರಂದು ದೆಹಲಿಗೆ ತೆರಳಲಿದ್ದಾರೆ ಎಂದು ಸಾಯಿಬಾಬಾ ಸಂಸ್ಥಾನದ ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಬಾಣಸಿಗರು ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿಗಳಿಗೆ ಇಷ್ಟವಾದ ಖಾದ್ಯಗಳನ್ನು ಉಣ ಬಡಿಸಲಿದ್ದಾರೆ.

ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಟಿ ರಕ್ಷಿತಾ ಪ್ರೇಮ್

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.