International Yoga Day: ಕೇದಾರನಾಥ ಧಾಮದಲ್ಲಿ ಸಿಬ್ಬಂದಿ, ಯಾತ್ರಿಕರಿಂದ ಯೋಗಾಭ್ಯಾಸ - ಅಂತರರಾಷ್ಟ್ರೀಯ ಯೋಗ ದಿನ
🎬 Watch Now: Feature Video
ಕೇದಾರನಾಥ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ, ಕೇದಾರನಾಥ ಧಾಮದಲ್ಲಿಯೂ ಇಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಯೋಗ ದಿನಾಚರಣೆಯಲ್ಲಿ ಐಟಿಬಿಪಿ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ಸಿಬ್ಬಂದಿಯಲ್ಲದೆ ಬದರಿನಾಥ ಕೇದಾರನಾಥ ದೇವಸ್ಥಾನ ಸಮಿತಿಯ ನೌಕರರು ಮತ್ತು ಯಾತ್ರಾರ್ಥಿಗಳು ಮತ್ತು ಯಾತ್ರಿಕರು ಕೂಡ ಭಾಗಿಯಾದರು. ವಿವಿಧ ರೀತಿಯ ಯೋಗಾಸನಗಳನ್ನು ಮಾಡುವ ಮೂಲಕ ಎಲ್ಲರೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಂಭ್ರಮಿಸಿದ್ದಾರೆ.
ಜವಾನರು, ನೌಕರರು, ಯಾತ್ರಿಕರಿಂದ ವಿವಿಧ ಯೋಗ ಪ್ರದರ್ಶನ: ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವದಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಅದೇ ರೀತಿಯಲ್ಲಿ, ಕೇದಾರನಾಥ ಧಾಮದ ದೇವಸ್ಥಾನದ ಹಿಂದೆ ಯೋಧರು, ದೇವಸ್ಥಾನದ ಸಿಬ್ಬಂದಿ ಮತ್ತು ಯಾತ್ರಾರ್ಥಿಗಳು ವಿವಿಧ ಭಂಗಿಯ ಆಸನಗಳನ್ನು ಮಾಡಿದರು. ಕಳೆದ 9 ವರ್ಷಗಳಿಂದ ಧಾಮದಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಕೇದಾರನಾಥದ ಪ್ರಧಾನ ಅರ್ಚಕರೂ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಸುಮಾರು ಒಂದು ಗಂಟೆ ಕಾಲ ವಿಶ್ವ ಯೋಗ ದಿನದ ಪ್ರಯಕ್ತ ಈ ಕಾರ್ಯಕ್ರಮ ಜರುಗಿತು.
ಇದನ್ನೂ ನೋಡಿ: Yoga Day: ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಆವರಣದಲ್ಲಿ ಯೋಗ ದಿನಾಚರಣೆ: ಗಾಂಧಿ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ