thumbnail

ಏಷ್ಯಾದ ಆರು ಹೊಸ ಸ್ಥಳಗಳಿಗೆ ನೇರ ವಿಮಾನಯಾನ ಆರಂಭಿಸಲಿರುವ ಇಂಡಿಗೋ!

By

Published : Jun 3, 2023, 6:54 AM IST

ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಬೃಹತ್ ಅಂತಾರಾಷ್ಟ್ರೀಯ ವಿಸ್ತರಣಾ ಅಭಿಯಾನವನ್ನು ಆರಂಭಿಸಿದೆ. ಈ ವರ್ಷ ನೈರೋಬಿ, ಟಿಬಿಲಿಸಿ ಮತ್ತು ತಾಷ್ಕೆಂಟ್ ಸೇರಿದಂತೆ ಆಫ್ರಿಕಾ ಮತ್ತು ಮಧ್ಯ ಏಷ್ಯಾದ ಆರು ಹೊಸ ಸ್ಥಳಗಳಿಗೆ ನೇರ ವಿಮಾನಯಾನ ಪ್ರಾರಂಭಿಸಲಿದೆ ಎಂದು ಇಂಡಿಗೋ ಸಂಸ್ಥೆ ಹೇಳಿದೆ. ಜುಲೈ ಅಂತ್ಯದಲ್ಲಿ ಅಥವಾ ಆಗಸ್ಟ್ ಆರಂಭದಲ್ಲಿ ಮುಂಬೈನಿಂದ ನೈರೋಬಿ ಮತ್ತು ಜಕಾರ್ತಾಕ್ಕೆ ನೇರ ವಿಮಾನಯಾನ  ಪ್ರಾರಂಭಿಸಲಾಗುತ್ತದೆ.

ಆಗಸ್ಟನಲ್ಲಿ ದೆಹಲಿಯಿಂದ ಟಿಬಿಲಿಸಿ, ಜಾರ್ಜಿಯಾ ಮತ್ತು ಬಾಕು, ಅಜರ್‌ಬೈಜಾನ್‌ಗೆ ಮತ್ತು ಸೆಪ್ಟೆಂಬರ್‌ನಲ್ಲಿ ತಾಷ್ಕೆಂಟ್, ಉಜ್ಬೇಕಿಸ್ತಾನ್ ಮತ್ತು ಅಲ್ಮಾಟಿ, ಕಝಾಕಿಸ್ತಾನ್‌ಗೆ ಸಂಪರ್ಕ ಹೊಂದಲಿದೆ. ಒಮ್ಮೆ ಈ ಮಾರ್ಗಗಳ ಕಾರ್ಯಾಚರಣೆ ಆರಂಭವಾದರೆ, ಬಜೆಟ್ ಏರ್‌ಲೈನ್ ಪ್ರಸ್ತುತ 26 ಕ್ಕೆ ಹೋಲಿಸಿದರೆ ಒಟ್ಟು 32 ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲಿದೆ ಎಂದು ಇಂಡಿಗೋ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಅಲ್ಲದೇ ಆಗಸ್ಟ್‌ನಲ್ಲಿ ದೆಹಲಿಯಿಂದ ಹಾಂಗ್​ಕಾಂಗ್‌ಗೆ ದೈನಂದಿನ ಸೇವೆಗಳನ್ನು ಪುನರಾರಂಭಿಸುವುದಾಗಿ ಇಂಡಿಗೋ ಹೇಳಿದೆ. ಮೂರು ವರ್ಷಗಳ ಹಿಂದೆ ಕೋವಿಡ್​ ಸಾಂಕ್ರಾಮಿಕ ಸಮಯದಲ್ಲಿ ಈ ವಿಮಾನವನ್ನು ಸ್ಥಗಿತಗೊಳಿಸಲಾಗಿತ್ತು. ಸಾಗರೋತ್ತರ ಮಾರುಕಟ್ಟೆಯಲ್ಲಿ ಪ್ರಸ್ತುತ ಟಾಟಾ ಗ್ರೂಪ್‌ನ ಏರ್ ಇಂಡಿಯಾ ಮತ್ತು ಅದರ ಕಡಿಮೆ-ವೆಚ್ಚದ ವಾಹಕ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಾಬಲ್ಯ ಹೊಂದಿದೆ.

ಇದನ್ನೂ ಓದಿ: ಶ್ರೀನಗರದಲ್ಲಿ 25 ಕಿಮೀ, ಜಮ್ಮುವಿನಲ್ಲಿ 23 ಕಿಮೀ ಉದ್ದದ ಮೆಟ್ರೋ ರೈಲು ಮಾರ್ಗ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.