ಜೀವ ಉಳಿಸಿಕೊಳ್ಳಲು ಚಿರತೆಯೊಂದಿಗೆ ಹೋರಾಡಿ ಕೊಂದ ಸಾಹಸಿ..! - ಈಟಿವಿ ಭಾರತ ಕನ್ನಡ ನ್ಯೂಸ್
🎬 Watch Now: Feature Video
ಇಡುಕ್ಕಿ (ಕೇರಳ): ಜಿಲ್ಲೆಯ ಮಂಕುಲಂ ಎಂಬಲ್ಲಿ ವ್ಯಕ್ತಿಯೊಬ್ಬ ತನ್ನ ಮೇಲೆ ದಾಳಿ ಮಾಡಿದ ಚಿರತೆಯನ್ನು ಕೊಂದು ಹಾಕಿರುವ ಘಟನೆ ನಡೆದಿದೆ. ಇಂದು ಬೆಳಗ್ಗೆ ಮಂಕುಲಂನ ಜನವಸತಿ ಪ್ರದೇಶದಲ್ಲಿ ಚಿರತೆಯೊಂದು ಗೋಪಾಲನ್ ಎಂಬವರ ಮೇಲೆ ದಾಳಿ ಮಾಡಿದೆ. ಈ ಸಂದರ್ಭ ತನ್ನ ಪ್ರಾಣ ಉಳಿಸಿಕೊಳ್ಳಲು ಗೋಪಾಲನ್ ಚಿರತೆಯನ್ನೇ ಕೊಂದು ಹಾಕಿದ್ದಾರೆ. ಅದೃಷ್ಟವಶಾತ್ ಗೋಪಾಲನ್ ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದ ದಿನ ರಾತ್ರಿ ಫಿಫ್ಟಿ ಮೈಲಿ ಎಂಬಲ್ಲಿ ಎರಡು ಮೇಕೆಗಳನ್ನು ಚಿರತೆ ಕೊಂದಿತ್ತು. ಅದಲ್ಲದೇ ಕೆಲವು ದಿನಗಳಿಂದ ಮಂಕುಳಂ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಿದ್ದು, ಅರಣ್ಯ ಇಲಾಖೆಯು ಚಿರತೆಯನ್ನು ಸೆರೆಹಿಡಿಯಲು ಕ್ಯಾಮೆರಾಗಳನ್ನು ಅಳವಡಿಸಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಎ ಕೆ ಸಶೀಂದ್ರನ್ ಚಿರತೆಯ ಕೊಂದ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದು ಹೇಳಿದ್ದಾರೆ.
Last Updated : Feb 3, 2023, 8:27 PM IST