ವಿಶ್ವಕಪ್ ಕ್ರಿಕೆಟ್: ಕಿವೀಸ್ ವಿರುದ್ಧದ ಸೆಮೀಸ್ ಫೈಟ್ಗೆ ಮುಂಬೈ ತಲುಪಿದ ಟೀಮ್ ಇಂಡಿಯಾ
🎬 Watch Now: Feature Video
Published : Nov 13, 2023, 7:10 PM IST
ಮುಂಬೈ (ಮಹಾರಾಷ್ಟ್ರ): ನಡೆಯುತ್ತಿರುವ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ 9 ಲೀಗ್ ಪಂದ್ಯಗಳನ್ನು ಗೆದ್ದು 2003ರ ರೀತಿಯಲ್ಲೇ ಸೆಮೀಸ್ ಪ್ರವೇಶ ಪಡೆದುಕೊಂಡಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡ ವಿಶ್ವಕಪ್ ಚಾಂಪಿಯನ್ ಆಗುವ ಫೆವರೀಟ್ ತಂಡವಾಗಿದೆ. ಭಾನುವಾರ ಕೊನೆಯ ಲೀಗ್ ಪಂದ್ಯವನ್ನು ನೆದರ್ಲೆಂಡ್ಸ್ ವಿರುದ್ಧ 160 ರನ್ಗಳಿಂದ ಗೆದ್ದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಸೆಮೀಸ್ ಫೈಟ್ಗಾಗಿ ಮುಂಬೈಗೆ ಬಂದಿಳಿದಿದೆ.
ನವೆಂಬರ್ 15 ರಂದು ಮುಂಬೈನ ವಾಂಖೆಡೆ ಕ್ರಿಡಾಂಗಣದಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವ ನ್ಯೂಜಿಲೆಂಡ್ ಮತ್ತು ರೋಹಿತ್ ಶರ್ಮಾ ಮುಂದಾಳತ್ವದ ಭಾರತ ಪಂದ್ಯವನ್ನಾಡಲಿದೆ. 2019ರ ವಿಶ್ವಕಪ್ನಲ್ಲಿ ಕಿವೀಸ್ ಟೀಮ್ ಇಂಡಿಯಾ ಸೆಮೀಸ್ನಲ್ಲಿ ಸೋಲಿಸಿ ವಿಶ್ವಕಪ್ನಿಂದ ಹೊರಹಾಕಿತ್ತು. ಬುಧವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ಈ ಸೇಡು ತೀರಿಸಿಕೊಳ್ಳಬೇಕಿದೆ. ಲೀಗ್ ಹಂತದಲ್ಲಿ ಬ್ಲೂ ಬಾಯ್ಸ್ ನ್ಯೂಜಿಲೆಂಡ್ ವಿರುದ್ಧ ಗೆದ್ದು ಇತಿಹಾಸ ನಿರ್ಮಿಸಿದರು. 2003ರ ವಿಶ್ವಕಪ್ ಅಂದರೆ 20 ವರ್ಷಗಳ ನಂತರ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಜಯ ಸಾಧಿಸಿತ್ತು.
ಮುಂಬೈ ವಿಮಾನ ನಿಲ್ದಾಣದ ಹೊರಗೆ ತಂಡದ ಆಟಗಾರರನ್ನು ನೋಡಲು ಅಭಿಮಾನಿಗಳು ನೆರೆದಿದ್ದರು. ರೋಹಿತ್ ಶರ್ಮಾ, ಶುಭಮನ್ ಗಿಲ್, ಕೆಎಲ್ ರಾಹುಲ್, ಕೋಚ್ ದ್ರಾವಿಡ್ ಮತ್ತು ತಂಡದ ಎಲ್ಲ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿ ಒಟ್ಟಿಗೆ ಪ್ರಯಾಣಿಸಿದ್ದರು. ವಿರಾಟ್ ಕೊಹ್ಲಿ ಮಾತ್ರ ಪ್ರತ್ಯೇಕವಾಗಿ ಮುಂಬೈಗೆ ಬಂದಿದ್ದಾರೆ.
ಇದನ್ನೂ ಓದಿ: ವಿರಾಟ್ ನಾಯಕತ್ವದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದ ವಿಶ್ವಕಪ್ ತಂಡ: ಟೀಮ್ನಲ್ಲಿ ನಾಲ್ವರು ಭಾರತೀಯರು