'I love you Chandy Appacha'... ಅಗಲಿದ ಕೇರಳ ಮಾಜಿ ಸಿಎಂಗೆ ವಿದ್ಯಾರ್ಥಿನಿಯ ಹೃದಯಸ್ಪರ್ಶಿ ವಿದಾಯ.. ವಿಡಿಯೋ ನೋಡಿ - ಉಮ್ಮನ್‌ ಚಾಂಡಿ ನಿಧನ

🎬 Watch Now: Feature Video

thumbnail

By

Published : Jul 20, 2023, 4:04 PM IST

ಪತ್ತನಂತಿಟ್ಟ (ಕೇರಳ): ಕೇರಳದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಉಮ್ಮನ್‌ ಚಾಂಡಿ ಅಗಲಿಕೆಗೆ ರಾಜ್ಯದ ಜನತೆ ಕಂಬನಿ ಮಿಡಿದ್ದಾರೆ. ತಮ್ಮ ನೆಚ್ಚಿನ ನಾಯಕನಿಗೆ ಅಸಂಖ್ಯಾತ ಜನರು ಕಣ್ಣೀರಿನ ವಿದಾಯ ಹೇಳಿದ್ದಾರೆ. ಇದರ ನಡುವೆ ಶಾಲಾ ವಿದ್ಯಾರ್ಥಿನಿಯೊಬ್ಬಳು 'ಐ ಲವ್ ಯೂ ಚಾಂಡಿ ಅಪ್ಪಚ್ಚ (ತಾತ).. ವಿಲ್​ ಮಿಸ್ ಯೂ' ಎಂಬ ಪೋಸ್ಟರ್​ ಹಿಡಿದು ಹೃದಯಸ್ಪರ್ಶಿ ಗೌರವ ಸಲ್ಲಿಸಿದ್ದು, ಇದು ಪ್ರತಿಯೊಬ್ಬರ ಕಣ್ಣುಗಳನ್ನು ತೇವಗೊಳಿಸಿದೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜುಲೈ 18ರಂದು ಉಮ್ಮನ್‌ ಚಾಂಡಿ ನಿಧನ ಹೊಂದಿದ್ದರು. ಅವರ ಪಾರ್ಥೀವ ಶರೀರವನ್ನು ತವರು ರಾಜ್ಯಕ್ಕೆ ಕೊಂಡೊಯ್ದು ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬುಧವಾರ ತಿರುವನಂತಪುರದಿಂದ ಹುಟ್ಟೂರು ಕೊಟ್ಟಾಯಂಗೆ ತೆರೆದ ವಾಹನದಲ್ಲಿ ಪಾರ್ಥಿವ ಶರೀರದ ಯಾತ್ರೆ ಸಾಗಿತು. ದಾರಿ ಉದ್ದಕ್ಕೂ ಜನರು ತಮ್ಮ ಪ್ರೀತಿಯ ನಾಯಕನಿಗೆ ಸಾವಿರಾರು ಗೌರವ ಅರ್ಪಿಸಿದರು.

ಇದನ್ನೂ ಓದಿ: Oommen Chandy passed away: ಉಮ್ಮನ್ ಚಾಂಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಕಾಂಗ್ರೆಸ್​​ ನಾಯಕರು

ಅಪಾರ ಸಂಖ್ಯೆಯಲ್ಲಿ ಅಗಲಿದ ನಾಯಕನನ್ನು ನೋಡಲು ಬಂದಾಗ ಕಾರಣ ಕೊಟ್ಟಾಯಂಗೆ ತಲುಪಲು 24 ಗಂಟೆ ತೆಗೆದುಕೊಂಡಿತು. ಪಾರ್ಥಿವ ಶರೀರವನ್ನು ಹೊತ್ತ ವಿಶೇಷವಾದ ಕೆಎಸ್‌ಆರ್‌ಟಿಸಿ ಲೋ ಫ್ಲೋರ್ ಬಸ್ ಸಾಗುತ್ತಿದ್ದ ಮಾರ್ಗದಲ್ಲಿ ಇಡೀ ರಾತ್ರಿ ಜನತೆ ಮಳೆಯನ್ನೂ ಲೆಕ್ಕಿಸದೇ ನೆರೆದಿದ್ದರು. ಮಹಿಳೆಯರು, ಮಕ್ಕಳು ಮತ್ತು ವೃದ್ಧರಾದಿಯಾಗಿ ಅಂತಿಮ ದರ್ಶನ ಪಡೆಯಲು ರಸ್ತೆಬದಿಯಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದರು.

ಶವಯಾತ್ರೆ ಮಧ್ಯರಾತ್ರಿ ಪತ್ತನಂತಿಟ್ಟ ಜಿಲ್ಲೆಯನ್ನು ಪ್ರವೇಶಿಸುತ್ತಿದ್ದಂತೆ ಅಡೂರಿನ ಸೇಂಟ್ ಜಾನ್ಸ್ ಮಲಂಕರ ಕ್ಯಾಥೋಲಿಕ್ ಚರ್ಚ್ ಮುಂದೆ ತನ್ನ ತಾಯಿಯೊಂದಿಗೆ ಶಾಲಾ ಸಮವಸ್ತ್ರದಲ್ಲಿ ಕಾದು ನಿಂತಿದ್ದ ವಿದ್ಯಾರ್ಥಿನಿಯೊಬ್ಬಳು ಎಲ್ಲರ ಹೃದಯಸ್ಪರ್ಶಿದಳು. ಈ ವಿದ್ಯಾರ್ಥಿಯು ತನ್ನ ಕೈಯಲ್ಲಿ 'ಐ ಲವ್ ಯೂ ಚಾಂಡಿ ಅಪ್ಪಚ್ಚ (ತಾತ).. ವಿಲ್​ ಮಿಸ್ ಯೂ' ಎಂಬ ಪೋಸ್ಟರ್​ ಹಿಡಿದು ಕಣ್ಣೀರು ಹಾಕುತ್ತಿದ್ದಳು. ಇದನ್ನು ಕಂಡ ಉಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್ ಪಾರ್ಥೀವ ಶರೀರದ ಪೆಟ್ಟಿಗೆ ಮೇಲೆ ಬಾಲಕಿಯ ಪೋಸ್ಟರ್ ಅಂಟಿಸಿದರು.

ಇದನ್ನೂ ಓದಿ: ನಾಳೆ ಮಾಜಿ ಸಿಎಂ ಉಮ್ಮನ್ ಚಾಂಡಿ ಅಂತ್ಯಕ್ರಿಯೆ: ಸರ್ಕಾರಿ ಗೌರವ ನಿರಾಕರಿಸಿದ ಕುಟುಂಬಸ್ಥರು

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.