ನಾನು ಲೋಕಸಭಾ ಚುನಾವಣೆ ಆಕಾಂಕ್ಷಿಯಲ್ಲ: ಗೋವಿಂದ ಕಾರಜೋಳ
🎬 Watch Now: Feature Video
ವಿಜಯಪುರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಂತೆ ಮಾಜಿ ಸಚಿವ ಗೋವಿಂದ ಕಾರಜೋಳ ಅವರು ವಿಜಯಪುರ ನಗರದಲ್ಲಿಂದು ಮಾದಿಗರ ಆತ್ಮಗೌರವ ಸಮಾವೇಶದಲ್ಲಿ ಪಾಲ್ಗೊಂಡ ವೇಳೆ ಪ್ರತಿಕ್ರಿಯಿಸಿದ್ದು, ನಾನು ಲೋಕಸಭಾ ಚುನಾವಣೆ ಆಕಾಂಕ್ಷಿಯಲ್ಲ. ರಾಜ್ಯದಲ್ಲಿ ಯುವಕರೊಂದಿಗೆ ಸಂಚರಿಸಿ 28 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲು ಏನೆಲ್ಲಾ ಪ್ರಯತ್ನ ಮಾಡಬೇಕೋ ಅದನ್ನು ಮಾಡುತ್ತೇನೆ ಎಂದರು.
ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, ಅಂತಹ ಕೂಗು ಪಕ್ಷದಲ್ಲಿ ಇಲ್ಲ. ಗಾಳಿ ಸುದ್ದಿಗಳನ್ನು ನಂಬಬಾರದು. ಸದ್ಯ ನಡೆಯುತ್ತಿರುವ ಮಾದಿಗರ ಆತ್ಮಗೌರವ ಸಮಾವೇಶಕ್ಕೂ ಲೋಕಸಭಾ ಚುನಾವಣೆಗೂ ಸಂಬಂಧ ಇಲ್ಲ. ಇದೊಂದು ಸಾಮಾಜಿಕ ನ್ಯಾಯದ ಹೋರಾಟ. ಜನರನ್ನು ಎಚ್ಚರಿಸುವ ಕೆಲಸ ಎಂದು ಹೇಳಿದರು.
ಅವಕಾಶ ಸಿಗದವರು ಅಸಮಾಧಾನಗೊಳ್ಳಬಾರದು. ಪಕ್ಷವನ್ನು ಎಲ್ಲರೂ ಸೇರಿ ಗಟ್ಟಿಗೊಳಿಸಿ ಚುನಾವಣೆ ಎದುರಿಸಬೇಕು ಎಂದು ಮನವಿ ಮಾಡಿದರು. ಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದರೆ ನೇಮಕವಾಗಿರುವ ಬಿಜೆಪಿ ಪದಾಧಿಕಾರಿಗಳ ಕಮಿಟಿ ವಿಸರ್ಜನೆ ಆಗಲಿದೆ ಎಂಬುದು ಊಹಾಪೋಹ. ನಮಗೆ ಸ್ಥಾನಗಳು ಕಡಿಮೆ ಆಗುವ ಪ್ರಶ್ನೆಯೇ ಇಲ್ಲ ಎಂಬ ವಿಶ್ವಾಸವನ್ನು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೋರ್ ಕಮಿಟಿ ಜೊತೆ ಚರ್ಚಿಸಿ ಪದಾಧಿಕಾರಿಗಳ ನೇಮಕ ಮಾಡಬೇಕಿತ್ತು: ಸದಾನಂದಗೌಡ ಅಸಮಾಧಾನ