ಕ್ರಿಕೆಟ್ ವಿಶ್ವಕಪ್ 2023: ಟೀಮ್ ಇಂಡಿಯಾ ಬೆಂಬಲಿಸಲು ಅಹಮದಾಬಾದ್‌ಗೆ ಬಂದ ಸಚಿನ್ ತೆಂಡೂಲ್ಕರ್...
🎬 Watch Now: Feature Video
ಅಹಮದಾಬಾದ್ (ಗುಜರಾತ್): ಶನಿವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಏಕದಿನ ವಿಶ್ವಕಪ್ 2023ರ ಬಹು ನಿರೀಕ್ಷಿತ ಪಂದ್ಯ ಪ್ರಾರಂಭವಾಗುವ ಮೊದಲು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಹಮದಾಬಾದ್‌ಗೆ ಆಗಮಿಸಿದರು. ಹೈ-ವೋಲ್ಟೇಜ್ ಪಂದ್ಯದ ವೀಕ್ಷಣೆಗಾಗಿ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಭಾರತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು, ''ಇಂಡಿಯಾ ತಂಡವನ್ನು ಬೆಂಬಲಿಸಲು ಅಹಮದಾಬಾದ್‌ಗೆ ತಲುಪಿದ್ದೇನೆ. ರೋಹಿತ್ ಶರ್ಮಾ ತಂಡವು ಬಯಸಿದ ಫಲಿತಾಂಶವನ್ನು ಪಡೆಯುತ್ತದೆ ಎಂದು ಆಶಿಸಿದರು.
"ತಂಡಕ್ಕೆ ಸಪೋರ್ಟ್ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ನಾವೆಲ್ಲರೂ ಬಯಸಿದಂತೆ ತಂಡವು ಉತ್ತಮ ಫಲಿತಾಂಶವನ್ನು ತನ್ನದಾಗಿಸಿಕೊಳ್ಳಲಿದೆ'' ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ. ಶನಿವಾರ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಬಾಲಿವುಡ್ ತಾರೆ ಹಾಗೂ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಅಹಮದಾಬಾದ್‌ಗೆ ಆಗಮಿಸಿದ್ದಾರೆ.
ಮತ್ತೊಂಡೆ, ಉತ್ತರಪ್ರದೇಶದಲ್ಲಿ ಭಾರತ ತಂಡದ ಅಭಿಮಾನಿಗಳಿಂದ ಹವನ, ಪೂಜೆ ನೆರವೇರಿಸಿದ್ದಾರೆ. ಟೀಂ ಇಂಡಿಯಾದ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.
ಇದನ್ನೂ ಓದಿ: World cup 2023: ಭಾರತ ಪಾಕ್ ಪಂದ್ಯಕ್ಕೆ ಕ್ಷಣಗಣನೆ.. ಹೇಗಿದೆ ಪಿಚ್, ಹವಾಮಾನ ವರದಿ