Watch Video - ಮನೆಯ ಆವರಣದಲ್ಲಿ ಪ್ರತ್ಯಕ್ಷವಾದ ಬೃಹತ್ ಗಾತ್ರದ ಹೆಬ್ಬಾವು.. ರಕ್ಷಿಸಿ ಕಾಡಿಗೆ ಬಿಟ್ಟ ಉರಗಪ್ರೇಮಿ
🎬 Watch Now: Feature Video
ಶಿರಸಿ (ಉತ್ತರ ಕನ್ನಡ): ಮನೆಯ ಆವರಣದಲ್ಲಿ ಪ್ರತ್ಯಕ್ಷವಾದ ಬೃಹತ್ ಗಾತ್ರದ ಹೆಬ್ಬಾವೊಂದನ್ನು ಸುರಕ್ಷಿತವಾಗಿ ಹಿಡಿದು ಮರಳಿ ಕಾಡಿಗೆ ಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಕುಳಗಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಕುಳಗಿಯ ಅಂಚೆ ಪಾಲಕ ರಘುವೀರ್ ಗೌಡ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಮುರಳೀಧರ್ ಗೌಡ ಅವರ ಮನೆಯ ಆವರಣದಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿತ್ತು. ಈ ಹೆಬ್ಬಾವನ್ನು ಕಂಡೊಡನೆ ಮನೆಮಂದಿಯೆಲ್ಲ ಹೌಹಾರಿದ್ದರು.
ನಂತರ ಮುರಳೀಧರ್ ಅವರು ಉರಗಪ್ರೇಮಿ ರಜಾಕ್ ಶಾ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ರಜಾಕ್ ಶಾ, ಮುರಳೀಧರ್ ಅವರ ಮನೆಯ ಆವರಣದಲ್ಲಿ ಅವಿತು ಕೂತಿದ್ದ ಹಾವನ್ನು ಧೈರ್ಯದಿಂದ ಮತ್ತು ಅಷ್ಟೇ ಸುರಕ್ಷಿತವಾಗಿ ಹಿಡಿದು ಮನೆಮಂದಿಯ ಆತಂಕವನ್ನು ದೂರ ಮಾಡಿದರು. ಅಲ್ಲದೆ, ಹಾವಿನ ಬಗ್ಗೆ ಜಾಗೃತಿ ಮೂಡಿಸಿದರು. ಬಳಿಕ ಹಬ್ಬಾವನ್ನು ಕಾಡಿಗೆ ಬಿಟ್ಟು ಬಂದಿದ್ದಾರೆ. ಈವರೆಗೆ ತಾವು ಎಲ್ಲಾ ವಿಧದ ಸುಮಾರು 20 ಸಾವಿರ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವ ಕುರಿತು ಮಾಹಿತಿಯನ್ನು ರಜಾಕ್ ಹಂಚಿಕೊಂಡರು.
ಇದನ್ನೂ ಓದಿ: ಪಶ್ಚಿಮ ಘಟ್ಟದಲ್ಲಿ ಮಳೆ ಅಬ್ಬರ: ಹಬ್ಬಾನಟ್ಟಿ ಮಾರುತಿ ದೇವಸ್ಥಾನಕ್ಕೆ ನುಗ್ಗಿದ ನೀರು; ಅಂಬೋಲಿ ಫಾಲ್ಸ್ನಲ್ಲಿ ಪ್ರವಾಸಿಗರ ದಂಡು