ಮಂಗಳೂರಿನ ಸಮುದ್ರ ತೀರದಲ್ಲಿ 2 ಟನ್ ತೂಕದ ಡಾಲ್ಫಿನ್ ಕಳೇಬರ ಪತ್ತೆ - Forest Department
🎬 Watch Now: Feature Video
ಮಂಗಳೂರು: ನಗರದ ತಣ್ಣೀರುಬಾವಿ ಸಮುದ್ರ ತೀರದಲ್ಲಿ ಇಂದು ಬೆಳಿಗ್ಗೆ ಬೃಹತ್ ಗಾತ್ರದ ಡಾಲ್ಫಿನ್ ಕಳೇಬರ ಪತ್ತೆಯಾಗಿದೆ. 10 ಅಡಿ ಉದ್ದವಿರುವ 2 ಟನ್ನಷ್ಟು ತೂಕವುಳ್ಳ ಈ ಡಾಲ್ಫಿನ್ ಯಾವುದೋ ಕಾರಣದಿಂದ ಮೃತಪಟ್ಟು ಸಮುದ್ರದಡದಲ್ಲಿ ಬಂದು ಬಿದ್ದಿದೆ. ಬೆಳಗಿನಜಾವ ಡಾಲ್ಫಿನ್ ಕಳೇಬರ ನೋಡಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪಶುವೈದ್ಯರು ಈ ಬಗ್ಗೆ ಪರಿಶೀಲನೆ ನಡೆಸಿದರು.
ಈ ಡಾಲ್ಫಿನ್ ಯಾವ ಕಾರಣ ಮೃತಪಟ್ಟಿದೆ ಎಂಬುದನ್ನು ತಿಳಿಯಲು ಅರಣ್ಯ ಇಲಾಖೆಯು, ಡಾಲ್ಫಿನ್ ಕಳೇಬರದ ಭಾಗವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಿದೆ. ವೈಜ್ಞಾನಿಕ ವರದಿ ಬಂದ ಬಳಿಕ ಡಾಲ್ಫಿನ್ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಎಲ್ಲಾ ಪರಿಶೀಲನೆ ನಂತರ ಡಾಲ್ಫಿನ್ ಕಳೇಬರವನ್ನು ಸಮುದ್ರ ತೀರದ ಸಮೀಪದಲ್ಲೇ ಹೂಳಲಾಯಿತು.
ಇವುಗಳನ್ನೂ ಓದಿ: