ತೆಂಗಿನಕಾಯಿ ರಾಶಿಯಲ್ಲಿ ಅವಿತಿದ್ದ ಬೃಹತ್ ನಾಗರಹಾವು... ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಉರಗ ತಜ್ಱ ದಿಲೀಪ್..
🎬 Watch Now: Feature Video
ತುಮಕೂರು: ಮನೆ ಮುಂದೆ ರಾಶಿಯಾಗಿ ಸುರಿದಿದ್ದ ತೆಂಗಿನ ಕಾಯಿಗಳ ನಡುವೆ ಕುಳಿತಿದ್ದ ಬೃಹತ್ ಗಾತ್ರದ ನಾಗರಹಾವೊಂದನ್ನು ವರಂಗಲ್ ಫೌಂಡೇಶನ್ ವನ್ಯಜೀವಿ ಹಾಗೂ ಉರಗ ರಕ್ಷಣಾ ಸಂಸ್ಥೆಯ ದಿಲೀಪ್ ರಕ್ಷಿಸಿದ್ದಾರೆ. ತುಮಕೂರು ಹೊರವಲಯದ ಅಂಚಿಹಳ್ಳಿ ಗ್ರಾಮದ ಪ್ರಕಾಶ್ ಎಂಬುವರ ಮನೆಯ ಮುಂದೆ ರಾಶಿಯಲ್ಲಿ ತೆಂಗಿನಕಾಯಿ ಸುರಿಯಲಾಗಿತ್ತು. ತೆಂಗಿನಕಾಯಿಗಳನ್ನು ತೆಗೆಯಲು ಹೋದ ಸಂದರ್ಭದಲ್ಲಿ ಸುಮಾರು ಆರು ಅಡಿ ಉದ್ದದ ನಾಗರಹಾವು ಪ್ರತ್ಯೇಕ್ಷಗೊಂಡು ಭೀತಿಗೊಳಿಸಿತು. ತಕ್ಷಣ ಮನೆಯವರು ವರಂಗಲ್ ಫೌಂಡೇಶನ್ ವನ್ಯಜೀವಿ ಹಾಗೂ ಊರಗ ರಕ್ಷಣಾ ಸಂಸ್ಥೆಗೆ ಕರೆ ಮಾಡಿದ್ದರು.
ಸ್ಥಳಕ್ಕೆ ಬಂದ ದಿಲೀಪ್ ಅವರು ನಾಗರ ಹಾವನ್ನು ಚೀಲದಲ್ಲಿ ಸುರಕ್ಷಿತವಾಗಿ ಹಿಡಿದುಕೊಂಡು ಹೋಗಿ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಬಂದು ಬಿಟ್ಟಿದ್ದಾರೆ. ಅಲ್ಲಿಯೂ ನಾಗರಹಾವು ಗಿಡ ಏರಿ ತನ್ನ ಎಡೆ ಬಿಚ್ಚುವುದರೊಂದಿಗೆ ಕ್ಯಾಮೆರಾ ಕಣ್ಣಿಗೆ ಅದ್ಭುತ ಮೈಮಾಟ ತೋರಿಸುತ್ತ ,ಧ್ವನಿಯಲ್ಲಿ ಅಬ್ಬರಿಸುತ್ತಿರುವುದು ಸೆರೆಹಿಡಿಯಲಾಗಿದೆ.
ಮನೆಮಂದಿ ಭಯಭೀತ: ಬೃಹತ್ ನಾಗರಹಾವು ಕಾಣಿಸಿಕೊಂಡ ತಕ್ಷಣ ಅಂಚಿಹಳ್ಳಿ ಗ್ರಾಮದ ಪ್ರಕಾಶ್ ಎಂಬುವರ ಮನೆಯ ಮಂದಿ ಭಯಭೀತರಾಗಿದ್ದರು. ತೆಂಗಿನಕಾಯಿ ರಾಶಿಯಲ್ಲಿ ಒಳಗೆ ಹೋಗಿ ನಾಗರಹಾವು ಗೊರಕೆ ಹೊಡೆದಂತೆ ಸದ್ದು ಮಾಡುತ್ತಿತ್ತು.
ಇದನ್ನೂಓದಿ:ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ.. ನಡುರಸ್ತೆಯಲ್ಲೇ ಹೊತ್ತಿ ಉರಿದ ಕಾರು: ವಿಡಿಯೋ