ತೆರೆದ ಗುಂಡಿಗೆ ಬಿದ್ದ ಕುದುರೆ, ಅಗ್ನಿಶಾಮಕ ದಳದಿಂದ ರಕ್ಷಣೆ- ವಿಡಿಯೋ - ಕುದುರೆ
🎬 Watch Now: Feature Video
ಬೆಳಗಾವಿ: ಇಲ್ಲಿನ ಖಾಸ್ಬಾಗ್ನ ಟೀಚರ್ಸ್ ಕಾಲೋನಿಯಲ್ಲಿ ನಿನ್ನೆ (ಸೋಮವಾರ) ಮಧ್ಯಾಹ್ನ ಕುದುರೆಯೊಂದು ನೀರಿದ್ದ ತೆರೆದ ಗುಂಡಿಗೆ ಬಿದ್ದು ಸಾವು- ಬದುಕಿನ ಮಧ್ಯೆ ಹೋರಾಡುತ್ತಿತ್ತು. ಸಕಾಲಕ್ಕೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕುದುರೆಯನ್ನು ರಕ್ಷಿಸಿದರು. ವಾಯು ವಿಹಾರಕ್ಕೆಂದು ಹುಡುಗರು ಕುದುರೆಯನ್ನು ತೆಗೆದುಕೊಂಡು ಹೋಗಿದ್ದು ನಿಯಂತ್ರಣ ತಪ್ಪಿ ಮನೆಯೊಂದರ ಮುಂದಿನ ತೆರೆದ ಗುಂಡಿಗೆ ಬಿದ್ದಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ ಮಳೆ ನೀರು: ಕೊಚ್ಚಿ ಹೋದ ಚಿನ್ನಾಭರಣ!
ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ತಂಡ ಕಾರ್ಯಾಚರಣೆ ನಡೆಸಿ ಕುದುರೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಏಣಿ ಮತ್ತು ಹಗ್ಗದ ಸಹಾಯದಿಂದ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಪ್ರಾಣಿಯನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು. ಮೇಲಿನಿಂದ ಗುಂಡಿಗೆ ಬಿದ್ದ ಪರಿಣಾಮ ಕುದುರೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ. ಶಾಹಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಸಹ ಕೋತಿ ಸಾವಿಗೆ ಕಾರಣವೆಂದು ವ್ಯಕ್ತಿ ಮೇಲೆ ಮಂಗಗಳ ದಾಳಿ.. ವಿಡಿಯೋ ವೈರಲ್