ದೇಶಾದ್ಯಂತ ಬಣ್ಣ ಬಣ್ಣದ ರಂಗಿನ ಹೋಳಿ ಸಡಗರ- ವಿಡಿಯೋ ನೋಡಿ - Foreigners celebrate Holi at Vrindavan
🎬 Watch Now: Feature Video
ಉತ್ತರ ಪ್ರದೇಶ: ಭಾರತಾದ್ಯಂತ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಚಳಿಗಾಲದ ಕೊನೆಯ, ವಸಂತ ಕಾಲದ ಆಗಮನವನ್ನು ಸಾರುವ ಹಬ್ಬ ಇದಾಗಿದೆ. ಯಾವುದೇ ಜಾತಿ, ಮತ, ಧರ್ಮಗಳ ಭೇದವಿಲ್ಲದೇ ದೇಶದ ನಾಗರಿಕರು ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಿದ್ದಾರೆ.
ಇದನ್ನೂ ಓದಿ: ಯುವಕರೊಂದಿಗೆ ಹೋಳಿ ಆಡಿ, ಡಿಜೆ ಸದ್ದಿಗೆ ಸಖತ್ ಸ್ಟೆಪ್ ಹಾಕಿದ ರೇಣುಕಾಚಾರ್ಯ
ಹೋಳಿ ಬಣ್ಣಗಳ ಹಬ್ಬವಾಗಿದ್ದು, ಜನರು ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುವ ಮೂಲಕ ಖುಷಿಪಡುತ್ತಿದ್ದಾರೆ. ಜೊತೆಗೆ ಬಣ್ಣ ಹಚ್ಚಿ, ಎಲ್ಲರ ಬಾಳಲ್ಲಿ ಸಂತಸ, ಸಂಭ್ರಮ ಬರಲೆಂದು ಆಶಿಸುತ್ತಾರೆ. ಉತ್ತರ ಪ್ರದೇಶದ ವಾರಣಾಸಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಅದ್ಧೂರಿಯಾಗಿ ಹೋಳಿ ಆಚರಣೆ ಮಾಡಲಾಯಿತು. ಈ ವೇಳೆ ಸೇರಿದ ಸಾವಿರಾರು ಮಂದಿ ಡಿಜೆ ಸೌಂಡ್ಗೆ ಹುಚ್ಚೆದ್ದು ಕುಣಿದರು. ಹಾಗೆಯೇ, ಮಥುರಾದ ವೃಂದಾವನದಲ್ಲಿ ಸಹ ವಿದೇಶಿಗರು ಬಣ್ಣಗಳನ್ನು ಎರಚುವ ಮೂಲಕ ನಮ್ಮ ದೇಶದ ಹಬ್ಬದಲ್ಲಿ ಪಾಲ್ಗೊಂಡರು.
ಇದನ್ನೂ ಓದಿ: ಹೋಳಿ ಹಬ್ಬಕ್ಕೆ ಲಗ್ಗೆ ಇಟ್ಟಿವೆ ಹಲಗೆಗಳು.. ವಾಣಿಜ್ಯ ನಗರಿಯನ್ನು ರಂಗೇರಿಸಲಿದ್ದಾನೆ ಮೇದಾರ ಓಣಿ ಹೋಳಿ ಕಾಮಣ್ಣ
TAGGED:
holi celebrations in india