ಮಸೀದಿ-ಮಂದಿರ ಒಟ್ಟೊಟ್ಟಿಗೆ.. ಮೊಹರಂನಲ್ಲಿ ಹಿಂದು-ಮುಸ್ಲಿಂ ಭಾವೈಕ್ಯತೆ ಸಾರುತ್ತಿದೆ ಗ್ರಾಮ - ವದನಾಳದಲ್ಲಿ ಹಿಂದು ಮುಸ್ಲಿಂ ಸೇರಿ ಮೊಹರಂ ಆಚರಣೆ

🎬 Watch Now: Feature Video

thumbnail

By

Published : Aug 8, 2022, 5:50 PM IST

Updated : Feb 3, 2023, 8:26 PM IST

ಕೊಪ್ಪಳ ತಾಲೂಕಿನ ವದನಾಳ ಗ್ರಾಮದಲ್ಲಿ ಬಹುತೇಕ ಹಬ್ಬಗಳನ್ನು ಮತ ಧರ್ಮ ಭೇದವಿಲ್ಲದೆ ಗ್ರಾಮಸ್ಥರೆಲ್ಲ ಸೇರಿ ಆಚರಿಸುತ್ತಾರೆ. ಅದರಲ್ಲೂ ಮೊಹರಂ ಹಿಂದು-ಮುಸ್ಲಿಂ ಭಾವೈಕ್ಯತೆ ಸಾರುವ ಹಬ್ಬವಾಗಿದ್ದು, ಇಲ್ಲಿಯ ಜನರು ಕೂಡ ಯಾವುದೇ ಭೇದ- ಭಾವವಿಲ್ಲದೆ ಪ್ರತಿ ವರ್ಷ ಮೊಹರಂ ಆಚರಿಸುತ್ತಾರೆ. ಕೇವಲ ನಾಲ್ಕು ಮುಸ್ಲಿಂ ಮನೆಗಳಿರುವ ಈ ಗ್ರಾಮದಲ್ಲಿ ಹಿಂದುಗಳೇ ಅಲಾಯಿ ದೇವರನ್ನು ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ಸಕ್ಕರೆ ಓದಿಸುವುದು ಸೇರಿದಂತೆ ವಿವಿಧ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸಂಭ್ರಮದಿಂದ ಮೊಹರಂ ಆಚರಿಸುತ್ತಾರೆ. ಗ್ರಾಮದ ಆರಾಧ್ಯ ದೈವ ಹಮ್ಮಿಗೇಶ್ವರ ದೇವಸ್ಥಾನದ ಪಕ್ಕದಲ್ಲೇ ಮಸೀದಿ ಇರುವುದು ವಿಶೇಷ.
Last Updated : Feb 3, 2023, 8:26 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.