ಹಾವೇರಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ; ಕಣ್ಮನ ಸೆಳೆದ ಕೇಕ್​ಗಳು

🎬 Watch Now: Feature Video

thumbnail

ಹಾವೇರಿ: ಜಿಲ್ಲೆಯಲ್ಲಿ ಹೊಸ ವರ್ಷ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ಜಿಲ್ಲೆಯ ಜನರು ಸಂಭ್ರಮದ ಕ್ಷಣಕ್ಕೆ ಕಾಯುತ್ತಿದ್ದಾರೆ. 2023 ಬೈ-ಬೈ ಹೇಳಿ 2024ಕ್ಕೆ ಅದ್ಧೂರಿಯಾಗಿ ಸ್ವಾಗತ ಕೋರಲು ಜನರು ಸನ್ನದ್ಧರಾಗಿದ್ದಾರೆ. ನಗರದಲ್ಲಿ ವಿವಿಧ ಕಾಲೊನಿ, ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಹೊಸ ವರ್ಷಾಚರಣೆ ಸಂಭ್ರಮವನ್ನು ಯುವಜನರು ಸೇರಿ ಆಚರಿಸುತ್ತಿದ್ದು, ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ.

ಹೊಸ ವರ್ಷಕ್ಕೆ ತರಹೇವಾರಿ ಕೇಕ್​ ರೆಡಿ: ಹೊಸ ವರ್ಷ ಸ್ವಾಗತಕ್ಕಾಗಿ ವಿಶೇಷವಾಗಿ ಹಾವೇರಿ ನಗರದ ಬೇಕರಿ ಅಂಗಡಿಗಳಲ್ಲಿ ತರಹೇವಾರಿ ಕೇಕ್​​​ಗಳನ್ನು ಸಿದ್ಧ ಮಾಡಿಕೊಂಡಿದ್ದು, ಜನರು ಖರೀದಿಗೆ ಅಂಗಡಿಗಳಿಗೆ ದಾಂಗುಡಿ ಇಟ್ಟಿದ್ದಾರೆ. ಕಾರ್ನರ್ ನಲ್ಲಿ ಸುಮಾರು ಸಾವಿರಕ್ಕೂ ಅಧಿಕ ಕೋಲ್ಡ್ ಕೇಕ್​, ನಾರ್ಮಲ್ ಕೇಕ್ ತಯಾರಿಸಲಾಗಿದೆ. ಚಾಕೊಲೇಟ್, ಪೈನಾಪಲ್, ವಿನೇಲಾ, ಸ್ಟಾಬೇರಿ ಸೇರಿದಂತೆ ವಿವಿಧ ತರಹದ ಫ್ಲೇವರಗಳಲ್ಲಿ ಕೇಕ್ ರೆಡಿ ಮಾಡಲಾಗಿದೆ.

2024 ವರ್ಷವನ್ನು ಮಧ್ಯರಾತ್ರಿಯಿಂದಲೇ ಸ್ವಾಗತ ಮಾಡಿಕೊಳ್ಳಲು ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು, ಪೊಲೀಸ್ ಇಲಾಖೆ ಬಿಗಿ ಭದ್ರತೆ ಒದಗಿಸಿದೆ. ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲಿ ಹದ್ದಿನ ಕಣ್ಣೀಟ್ಟಿದೆ. ಬಸ್ ನಿಲ್ದಾಣ ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದಿಂದ ಶೋಧ ಕಾರ್ಯ ನಡೆಸಲಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಎಲ್ಲ ರೀತಿಯ ಭದ್ರತೆ ಕೈಗೊಳ್ಳಲಾಗಿದ್ದು ಜನತೆ ನೆಮ್ಮದಿಯ ಹೊಸ ವರ್ಷಾಚರಣೆಗೆ ಅಡ್ಡಿಯಾಗದಂತೆ ಮುಂಜಾಗ್ರತೆ ಕ್ರಮ ಕೈಗೊಂಡಿರುವದಾಗಿ ಹಾವೇರಿ ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ.

ಇದನ್ನೂಓದಿ:ಹೊಸ ವರ್ಷಾಚರಣೆ: ಎಂಜಿ ರಸ್ತೆ, ಬ್ರಿಗೇಡ್​​ ರೋಡ್​ನಲ್ಲಿ ಕಳೆಗಟ್ಟಿದ ಸಂಭ್ರಮಾಚರಣೆ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.