ETV Bharat / education-and-career

ಕರ್ನಾಟಕ ಲೋಕಾಯುಕ್ತದಲ್ಲಿ ಟೈಪಿಸ್ಟ್​​ ಕಂ ಕ್ಲರ್ಕ್​ ಹುದ್ದೆ; ಅರ್ಜಿ ಸಲ್ಲಿಕೆಗೆ ಇನ್ನೆರಡೇ ದಿನ ಬಾಕಿ

ಲೋಕಾಯುಕ್ತ ಇಲಾಖೆಯಲ್ಲಿ ಒಟ್ಟು 30 ಟೈಪಿಸ್ಟ್​​ ಕಂ ಕ್ಲರ್ಕ್​ ಹುದ್ದೆಗಳಿದ್ದು, ಇದರಲ್ಲಿ ಕಲ್ಯಾಣ ಕರ್ನಾಟಕಕ್ಕೆ 14 ಹುದ್ದೆಗಳನ್ನು ಮೀಸಲಿರಿಸಲಾಗಿದೆ.

n.29 is the last date to apply cum Typist job in Karnataka Lokayukta
ಕರ್ನಾಟಕ ಲೋಕಾಯುಕ್ತ (ETV Bharat file photo)
author img

By ETV Bharat Karnataka Team

Published : Nov 27, 2024, 4:53 PM IST

ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಗ್ರೂಪ್​ ಸಿ ವೃಂದದ ಟೈಪಿಸ್ಟ್​​ ಕಂ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಇನ್ನೆರಡು ದಿನ ಬಾಕಿ ಉಳಿದಿದೆ. ಒಟ್ಟು 30 ಹುದ್ದೆಗಳ ನೇಮಕಾತಿಗೆ ಈಗಾಗಲೇ ಅಧಿಸೂಚನೆ ಪ್ರಕಟಿಸಲಾಗಿದೆ. ಈ ಹುದ್ದೆ ಕುರಿತ ಮಾಹಿತಿ ಇಲ್ಲಿದೆ..

ಹುದ್ದೆ ವಿವರ: ಒಟ್ಟು 30 ಟೈಪಿಸ್ಟ್​​ ಕಂ ಕ್ಲರ್ಕ್​ ಹುದ್ದೆ. ಇದರಲ್ಲಿ ಕಲ್ಯಾಣ ಕರ್ನಾಟಕಕ್ಕೆ 14 ಹುದ್ದೆಗಳನ್ನು ಮೀಸಲಿರಿಸಲಾಗಿದೆ.

n.29 is the last date to apply cum Typist job in Karnataka Lokayukta
ಅಧಿಸೂಚನೆ (ಕರ್ನಾಟಕ ಲೋಕಾಯುಕ್ತ)

ವಿದ್ಯಾರ್ಹತೆ: ಅಭ್ಯರ್ಥಿಯು ಪಿಯುಸಿ ಉತ್ತೀರ್ಣಗೊಂಡು, ಕರ್ನಾಟಕ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆ ಉತ್ತೀರ್ಣಗೊಂಡಿರಬೇಕು.

ವಯೋಮಿತಿ: ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 38 ವರ್ಷ, ಪ್ರವರ್ಗ 2ಎ , 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ.ಜಾ, ಪ. ಪಂ ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಸಾಮಾನ್ಯ, 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 250 ರೂ. ಅರ್ಜಿ ಶುಲ್ಕ ನಿಗದಿಸಲಾಗಿದೆ. ಪ. ಜಾ, ಪ.ಪಂ ಮತ್ತು ಪ್ರವರ್ಗ 1 ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಈ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಗೆ ಅಕ್ಟೋಬರ್​ 30ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್​ 29 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ lokayukta.karnataka.gov.in ಭೇಟಿ ನೀಡಿ.

ಇದನ್ನೂ ಓದಿ: ಪಿಜಿ ವೈದ್ಯಕೀಯ ಕೋರ್ಸ್ ಗಳ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.