ಮದುವೆ ಸಂಭ್ರಮದಲ್ಲಿ ಹಣ ತೂರಿದ ಕುಟುಂಬ.. ದುಡ್ಡಿಗಾಗಿ ಮುಗಿಬಿದ್ದ ಜನರು - ವಿಡಿಯೋ - Gujarat wedding
🎬 Watch Now: Feature Video
ಮೆಹ್ಸಾನಾ (ಗುಜರಾತ್): ಪ್ರಸಿದ್ಧ ಮತ್ತು ಜನಪ್ರಿಯ ಸಂಗೀತ ಕಛೇರಿಗಳಲ್ಲಿ ಗಾಯಕ-ಗಾಯಕಿಯರ ಮೇಲೆ ನೋಟಿನ ಮಳೆ ಸುರಿಸುವ ಕೆಲ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತವೆ. ಆದರೆ, ಮದುವೆ ಸಂದರ್ಭದಲ್ಲಿ ಜನರ ಮೇಲೆ ಹಣದ ಮಳೆಗರೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಕಡಿ ತಾಲೂಕಿನಲ್ಲಿ ಈ ನೋಟಿನ ಮಳೆ ಸುರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ ನೂರಾರು ಜನರು ರಸ್ತೆಯಲ್ಲಿ ನಿಂತಿರುವುದು. ಮನೆಯ ಟೆರೇಸ್‌ನಿಂದ ಹತ್ತಾರು ಮಂದಿ ಗಾಳಿಯಲ್ಲಿ 100, 200, 500ರ ನೋಟುಗಳನ್ನು ತೂರುತ್ತಿರುವುದು. ಮೇಲಿಂದ ಎಸೆಯುತ್ತಿರುವ ನೋಟುಗಳನ್ನು ಹಿಡಿಯಲು ಅತಿಥಿಗಳು ಮತ್ತು ದಾರಿಹೋಕರು ಪ್ರಯತ್ನಿಸುವುದು ಸೆರೆಯಾಗಿದೆ. ಕಳೆದ ಮೂರು ದಿನಗಳಿಂದ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.
ಇಲ್ಲಿನ ಮಾಜಿ ಸರಪಂಚ್ ಕರೀಂಬಾಯಿ ದಾದುಭಾಯಿ ಜಾಧವ್ ಅವರ ಸೋದರಳಿಯ ರಜಾಕ್ ವಿವಾಹದ ಸಂದರ್ಭದಲ್ಲಿ ನೋಟಿನ ಮಳೆ ಸುರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇವರ ಕುಟುಂಬದಲ್ಲಿ ರಜಾಕ್ ಒಬ್ಬನೇ ಮಗನಾಗಿದ್ದು, ವಿವಾಹವನ್ನು ವಿಭಿನ್ನವಾಗಿ ಮಾಡಲು ನಿರ್ಧರಿಸಿದ್ದರು. ಹೀಗಾಗಿ, ಜನರ ಮೇಲೆ ನೋಟನ್ನು ಸುರಿಸಲಾಗಿದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ಫೇಮಸ್ ಆಗಲು ಕಂತೆ-ಕಂತೆ ನೋಟು ಎಸೆದು ಪೊಲೀಸರ ಅತಿಥಿಯಾದ ಯೂಟ್ಯೂಬರ್!