ಚಲಿಸುತ್ತಿದ್ದ ಬಸ್ಸಿನ ಹಿಂಬದಿ ಗಾಜು ಒಡೆದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು!- ವಿಡಿಯೋ
🎬 Watch Now: Feature Video
ಗುಜರಾತ್: ರಸ್ತೆಯ ಸ್ಪೀಡ್ ಬ್ರೇಕರ್ ದಾಟುತ್ತಿದ್ದಂತೆ ಬಸ್ನ ಹಿಂಬದಿಯ ಗಾಜು ಒಡೆದು ಇಬ್ಬರು ವಿದ್ಯಾರ್ಥಿಗಳು ರಸ್ತೆಗೆ ಬಿದ್ದು ಗಾಯಗೊಂಡರು. ಈ ಘಟನೆ ಗುಜರಾತ್ನ ಜಾಮ್‌ನಗರದಲ್ಲಿ ಇಂದು ನಡೆದಿದೆ. ಘಟನೆಯ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಜಾಮ್ನಗರದ ನಗರ ಸಾರಿಗೆ ಬಸ್ ಚಾಲಕ ರಸ್ತೆಯಲ್ಲಿರುವ ಸ್ಪೀಡ್ ಬ್ರೇಕರ್ ಮೇಲೆ ಸ್ವಲ್ಪ ವೇಗವಾಗಿ ಚಲಾಯಿಸದ ಕಾರಣ ಬಸ್ನ ಹಿಂದೆ ಇರುವ ಕಿಟಕಿಯ ಗಾಜು ಒಡೆದಿದೆ. ಇಬ್ಬರು ವಿದ್ಯಾರ್ಥಿಗಳು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ನಡುರಸ್ತೆಯಲ್ಲಿ ವಿದ್ಯಾರ್ಥಿಗಳು ಬಿದ್ದರೂ ವಿಷಯ ತಿಳಿಯದ ಚಾಲಕ ಬಸ್ ಚಲಾಯಿಸಿಕೊಂಡು ಮುಂದೆ ಸಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆಯ ಬಗ್ಗೆ ಬಸ್ ಡಿಪೋ ಮ್ಯಾನೇಜರ್ ಜೆ.ವಿ.ಇಶ್ರಾಣಿ ಮಾತನಾಡಿ, "ಇಂದು ಬೆಳಗ್ಗೆ ಜಾಮ್‌ನಗರದಲ್ಲಿ ಬಸ್ವೊಂದರ ಹಿಂದಿನ ಗಾಜು ಒಡೆದು ಇಬ್ಬರು ವಿದ್ಯಾರ್ಥಿಗಳು ರಸ್ತೆ ಬಿದ್ದಿದ್ದಾರೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ಚಾಲಕನನ್ನು ಅಮಾನತುಗೊಳಿಸಲಾಗಿದೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಮಲೆನಾಡಿಗೆ ತಂಪೆರೆದ ಮಳೆರಾಯ; ವಿಪರೀತ ಸೆಖೆಯಿಂದ ಕೊಂಚ ನಿರಾಳರಾದ ಜನತೆ