ಮಗುವಿನ ಕುತ್ತಿಗೆ ಮೇಲೆ ಕಾಲಿಟ್ಟು ಬ್ಯಾಟ್ನಿಂದ ಥಳಿಸಿದ ಅಜ್ಜಿ! ಕ್ರೌರ್ಯತೆ ಕಂಡು ನೆಟ್ಟಿಗರು ಗರಂ - ಮಗುವಿನ ಮೇಲೆ ಅಜ್ಜಿಯ ದರ್ಪ
🎬 Watch Now: Feature Video
ಉತ್ತರಪ್ರದೇಶದ ಮಹಾರಾಜ್ಗಂಜ್ನ ಸೋನ್ರಾ ಗ್ರಾಮದಲ್ಲಿ ಹೃದಯ ವಿದ್ರಾವಕ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇಲ್ಲಿನ ನಿವಾಸಿ ಸತ್ಯಪ್ರಕಾಶ್ ಮತ್ತು ಅಂಗೀರಾ ದಂಪತಿಗೆ ಮುದ್ದಾದ ಮಗುವಿದೆ. ಆದ್ರೆ ತಾಯಿ ಅಂಗೀರಾಗೆ ಮಾತು ಬರಲ್ಲ. ಅಂಗೀರಾ ಈಗ ತವರು ಮನೆಯಲ್ಲಿ ವಾಸಿಸುತ್ತಿದ್ದು, ಮಗು ತಂದೆ ಸತ್ಯಪ್ರಕಾಶ್ ಬಳಿ ಇದೆ. ವೈರಲ್ ಆದ ವಿಡಿಯೋದಲ್ಲಿ ಅಜ್ಜಿಯೊಬ್ಬರು 5 ವರ್ಷದ ಮುಗ್ಧ ಮಗುವನ್ನು ಕಟ್ಟಿಗೆ ಬ್ಯಾಟ್ನಿಂದ ಥಳಿಸುತ್ತಿದ್ದಾಳೆ. ಅಷ್ಟೇ ಅಲ್ಲ, ಆ ಅಜ್ಜಿ ಮಗುವಿನ ಕುತ್ತಿಗೆಯ ಮೇಲೆ ಕಾಲಿಟ್ಟು, ಕಟ್ಟಿಗೆಯಿಂದ ಥಳಿಸುತ್ತಿರುವುದು ಕಾಣಬಹುದಾಗಿದೆ. ನಂತರ ಹೊಲಕ್ಕೆ ಕರೆದೊಯ್ದು ಗದ್ದೆಯಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿಸುತ್ತಿರುವುದು ಕಂಡು ಬಂದಿದೆ. ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಗುವಿನ ಮೇಲೆ ಅಜ್ಜಿಯ ದರ್ಪ ಕಂಡು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೆಂಡಮಂಡಲಾಗುತ್ತಿದ್ದಾರೆ.
Last Updated : Feb 3, 2023, 8:27 PM IST