ಹಾಲ್ನೊರೆಯಂತೆ ಭೋರ್ಗರೆಯುತ್ತಿದೆ‌ ಗೋಕಾಕ್ ಫಾಲ್ಸ್! ಡ್ರೋನ್ ದೃಶ್ಯ ನೋಡಿ - Captured on a drone camera

🎬 Watch Now: Feature Video

thumbnail

By

Published : Aug 4, 2023, 10:06 PM IST

ಬೆಳಗಾವಿ: ಪಶ್ಚಿಮ ಘಟ್ಟದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ 'ಭಾರತದ ನಯಾಗರ' ಎಂದೇ ಖ್ಯಾತಿ ಪಡೆದಿರುವ ಗೋಕಾಕ್ ಜಲಪಾತಕ್ಕೆ ಜೀವಕಳೆ ಬಂದಿದೆ. ಧುಮ್ಮಿಕ್ಕಿ ಹರಿಯುತ್ತಿರುವ ಜಲಾಧಾರೆಯ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹಾಲ್ನೊರೆಯಂತೆ ಗೋಕಾಕ್ ಫಾಲ್ಸ್ ಉಕ್ಕಿ ಹರಿಯುತ್ತಿದೆ. ನಯನ ಮನೋಹರ ದೃಶ್ಯ ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದು ಅಂತಿದ್ದಾರೆ ಪ್ರವಾಸಿಗರು. ಘಟಪ್ರಭಾ ಮತ್ತು ಹಿರಣ್ಯಕೇಶಿ‌ ನದಿ ನೀರು ಸಮ್ಮಿಲನಗೊಂಡು ಜಲಪಾತದಲ್ಲಿ ನೀರು ಬೀಳುವ ದೃಶ್ಯ ರೋಮಾಂಚನಗೊಳಿಸುತ್ತಿದೆ.

ಗೋಕಾಕ್ ನಗರದಿಂದ ಹತ್ತು ಕಿ.ಮೀ ದೂರದಲ್ಲಿದೆ ಗೋಕಾಕ್ ಫಾಲ್ಸ್. ಬಂಡೆಗಲ್ಲುಗಳ ಮಧ್ಯೆ ಹರಿದು ಬರುವ ನೀರು 170 ಅಡಿ ಎತ್ತರದಿಂದ ನೆಲಕ್ಕಪ್ಪಳಿಸುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸಿ ಜಲಪಾತದ ವೈಭವ ಸವಿಯುತ್ತಿದ್ದಾರೆ.

ಜಲಪಾತವನ್ನು ಸಮೀಪದಿಂದ ನೋಡಲು ಪ್ರವಾಸಿಗರಿಗೆ ಅವಕಾಶ ನಿರ್ಬಂಧಿಸಲಾಗಿದೆ. ಜಲಪಾತದ ತುದಿಗೆ ಬ್ಯಾರಿಕೇಡ್ ಹಾಕಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಿಗದಿಪಡಿಸಿದ್ದ ಸ್ಥಳದಲ್ಲೇ ನಿಂತುಕೊಂಡು ಯುವಕ, ಯುವತಿಯರು ಸೆಲ್ಫಿ ಕ್ಲಿಕ್ಕಿಸಿಕೊಂಡು, ರೀಲ್ಸ್ ವಿಡಿಯೋ ಮಾಡಿಕೊಂಡು ಖುಷಿಪಡುತ್ತಿರುವ ದೃಶ್ಯ ಇಲ್ಲಿ ಸಾಮಾನ್ಯವಾಗಿದೆ. 

ಇದನ್ನೂಓದಿ:ಕಾಫಿನಾಡಿಗೆ ಬಂದ್ರೆ ಸ್ವರ್ಗ.. ಹಾಲ್ನೊರೆಯಂತೆ ಉಕ್ಕಿ ಹರಿಯುವ ಹೊನ್ನಮ್ಮನ ಹಳ್ಳ ಫಾಲ್ಸ್​​ಗೆ ಪ್ರವಾಸಿಗರು ಫಿದಾ..

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.