ಮಯೂರಿ ಅಲಂಕಾರದಲ್ಲಿ ಚಾಮುಂಡೇಶ್ವರಿ ದೇವಿ: ನಿಂಬೆಹಣ್ಣಿನ ಆರತಿ ಬೆಳಗಿದ ಮಹಿಳೆಯರು- ವಿಡಿಯೋ
🎬 Watch Now: Feature Video
ಚಾಮರಾಜನಗರ: ಇಂದು ಎರಡನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮರಾಜನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ಭಕ್ತಸಾಗರವೇ ಸೇರಿತ್ತು. ಆಷಾಢ ಮಾಸದಲ್ಲಿ ಮಹಿಳೆಯರು ನಿಂಬೆಹಣ್ಣಿನ ಆರತಿ ಬೆಳಗುವುದು ಇಲ್ಲಿನ ವಿಶೇಷತೆ. ಹೀಗಾಗಿ ಅಪಾರ ಸಂಖ್ಯೆಯಲ್ಲಿ ಸೇರಿ ನಿಂಬೆಹಣ್ಣಿನ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು.
ಸ್ತ್ರೀ ದೇವತೆಗಳಿಗೆ ಪ್ರಿಯವಾದ ನಿಂಬೆ ಹಣ್ಣಿನ ದೀಪದಿಂದ ಪೂಜೆ ಸಲ್ಲಿಸಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬುದು ನಂಬಿಕೆ. ಹೀಗಾಗಿ ವಿವಾಹಿತ ಮಹಿಳೆಯರು ತಮ್ಮ ಮುತ್ತೈದೆ ಭಾಗ್ಯ ದೀರ್ಘಕಾಲ ಉಳಿಯಲಿ ಎಂದು ಪ್ರಾರ್ಥಿಸಿ ನಿಂಬೆ ಹಣ್ಣಿನ ಆರತಿ ಮಾಡುತ್ತಾರೆ. ಯುವತಿಯರು ಆದಷ್ಟು ಬೇಗ ಕಂಕಣಭಾಗ್ಯ ಕೂಡಿ ಬರಲೆಂದು ಭಕ್ತಿಯಿಂದ ಪೂಜೆ ಸಲ್ಲಿಸುವರು. ದೇವಿಗೆ ಅರ್ಚಕ ನಾಗರಾಜ್ ದೀಕ್ಷಿತ್ ಮತ್ತು ರಾಮಕೃಷ್ಣ ಭಾರದ್ವಾಜ್ ಅವರು ಮಯೂರಿ ಅಲಂಕಾರ ಮಾಡಿದ್ದು ವಿಶೇಷವಾಗಿ ಗಮನ ಸೆಳೆಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು. ಜಿಲ್ಲಾಡಳಿತ ಬೆಟ್ಟಕ್ಕೆ ಎಲ್ಲ ರೀತಿಯ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಿದ್ದು, ಲಲಿತ ಮಹಲ್ ಮೈದಾನದಿಂದ ಉಚಿತ ಬಸ್ ಸೌಕರ್ಯ ಕಲ್ಪಿಸಲಾಗಿತ್ತು.
ಇದನ್ನೂ ಓದಿ : ರಾಜಸ್ಥಾನದ ಪ್ರಸಿದ್ಧ ಅಂತಾರಾಷ್ಟ್ರೀಯ ಒಂಟೆ ಉತ್ಸವಕ್ಕೆ ವರ್ಣರಂಜಿತ ಚಾಲನೆ