39 ಗಂಟೆಗಳಲ್ಲಿ 19000 ಅಡಿ ಎತ್ತರದ ಶಿಖರ ಏರಿ ವಿಶ್ವದಾಖಲೆ ಬರೆದ 6ರ ಬಾಲೆ - girl made a world record by climbing

🎬 Watch Now: Feature Video

thumbnail

By

Published : Mar 4, 2023, 7:45 PM IST

ಲೂಧಿಯಾನ (ಪಂಜಾಬ್​): ಇಲ್ಲಿಯ ಹೆಬೋವಾಲ್​ನ ಆರೂವರೆ ವರ್ಷದ ಬಾಲಕಿ ಸಿಯೆನ್ನಾ ಚೋಪ್ರಾ ಜನವರಿ 26ರಂದು ದಕ್ಷಿಣ ಆಫ್ರಿಕಾದ ಅತ್ಯಂತ ಎತ್ತರದ ಶಿಖರ ಕಿಲಿಮಂಜಾರೊ ಮತ್ತು ಮೇರು ಪರ್ವತವನ್ನು ಹತ್ತಿ ಅಲ್ಲಿ ತ್ರಿವರ್ಣ ಧ್ವಜ  ಹಾರಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದಾಳೆ. ಸುಮಾರು 19000 ಅಡಿ ಎತ್ತರದ ಪರ್ವತವನ್ನು ಸಿಯೆನ್ನಾ ಚೋಪ್ರ ಕೇವಲ 39 ಗಂಟೆಗಳಲ್ಲಿ ಏರಿದ್ದಾರೆ. ಈ ಬಗ್ಗೆ ಬಾಲಕಿ ತಂದೆ ಪ್ರತಿಕ್ರಿಯೆ ನೀಡಿ, ಇದವರೆಗೂ ಯಾರೊಬ್ಬರು ನಿರಂತರವಾಗಿ ಈ ಎತ್ತರದ ಪರ್ವತವನ್ನು ಹತ್ತಿ ದಾಖಲೆ ಮಾಡಿಲ್ಲ. ಕೇವಲ 39 ಗಂಟೆಗಳಲ್ಲಿ ಪರ್ವತ ಹತ್ತಿ ಸಿಯೆನ್ನಾ ಈ ಸಾಧನೆ ಮಾಡಿದ್ದಾಳೆ ಎಂದರು. ಇದೇ ವೇಳೆ ಸಿಯೆನ್ನ ಮಾತನಾಡಿ, ತನ್ನ ದೇಶದ ಹೆಸರನ್ನು ವಿಶ್ವ ದಾಖಲೆಯ ಪುಟದಲ್ಲಿ ಸೇರಿಸಿರುವುದು ತುಂಬಾ ಸಂತಸ ತಂದಿದೆ ಎಂದರು.  

ಬಾಲಕಿಗೆ ಶಾಸಕ ಕುಲವಂತ್​ ಸಿಧು ಸನ್ಮಾನ: ಬಾಲಕಿಯ ಈ ಸಾಧನೆಗೆ ಲೂಧಿಯಾನದ ಶಾಸಕ ಕುಲ್ವಂತ್​ ಸಿಧು ಬಾಲಕಿ ಸೇರಿದಂತೆ ಅವರ ಪಾಲಕರಿಗೆ ಶ್ಲಾಘಿಸಿ ಸನ್ಮಾನಿಸಿದರು.  ಇನ್ನು ಎತ್ತರದ ಶಿಖರಗ ಕಿಲಿಮಂಜಾರೊ ಮತ್ತು ಮೇರು ಪರ್ವತ ಹತ್ತುವ ಮುನ್ನ ಬಾಲಕಿ ಮತ್ತು ಅವರ ತಂದೆ ಶಾಸಕ ಕುಲ್ವಂತ್​ ಸಿದ್ದು ಅವರನ್ನು ಭೇಟಿಯಾಗಿರುವುದಾಗಿ ಇದೇ ವೇಳೆ ಬಾಲಕಿ ತಂದೆ ತಿಳಿಸಿದರು. ಬಾಲಕಿಯ ಈ ಸಾಧನೆಯನ್ನು ಮೆಚ್ಚಿಕೊಂಡ ಸಿದ್ದು, ಸಿಯೆನ್ನಾ ಇಡೀ ದೇಶ ಹೆಮ್ಮೆ ಪಡುವಂತೆ ಮಾಡಿದ್ದೀರಿ. ಅಲ್ಲದೇ ಆರೂವರೆ ವರ್ಷದಲ್ಲಿ ಇದುವರೆಗೂ ಯಾರು ಮಾಡದ ಸಾಧನೆ ಮಾಡಿರುವ ಸಿಯೆನ್ನಾ ದೇಶಕ್ಕೆ ಮತ್ತು ಲೂಧಿಯಾನ ಹಾಗೂ ಪಂಜಾಬ್​ಗೆ ಗೌರವ ತಂದಿದ್ದಾರೆ ಎಂದು ಹೇಳಿದರು. 

ಇದನ್ನೂ ಓದಿ: ನವಾರಿ ಸೀರೆ ಧರಿಸಿ ಎತ್ತರದ ಪರ್ವತ ಏರಿದ 8ರ ಬಾಲೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.