ಗವಿಸಿದ್ದೇಶ್ವರ ಮಹಾರಥೋತ್ಸವದಲ್ಲಿ ಗಮನ ಸೆಳೆದ ವಿದೇಶಿ ದಂಪತಿ: ವಿಡಿಯೋ - etv bharat kannada
🎬 Watch Now: Feature Video
ಕೊಪ್ಪಳ: ಭಾನುವಾರ ಸಂಜೆ ಕೊಪ್ಪಳದ ಗವಿಸಿದ್ದೇಶ್ವರ ಮಹಾರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ರಥೋತ್ಸವದಲ್ಲಿ ವಿದೇಶಿ ದಂಪತಿ ಭಾಗಿಯಾಗಿ ಗಮನ ಸೆಳೆದರು. ಜನಸ್ತೋಮ ಕಂಡು ನಿಬ್ಬೆರಗಾದ ದಂಪತಿ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು. ಹಿಂದೂ ಸಂಪ್ರದಾಯದ ದ್ಯೋತಕವಾಗಿ ಕೇಸರಿ ಶಲ್ಯ ಧರಿಸಿ, ಮಹಾರಥೋತ್ಸವವನ್ನು ಕಣ್ತುಂಬಿಕೊಂಡರು. ಬೊಂಬೆ ಮೆರವಣಿಗೆಯಲ್ಲಿ ಯುವಕರು ಹುಚ್ಚೆದ್ದು ಕುಣಿಯುವಾಗ ಅವರಿಗೆ ಸಾಥ್ ಕೊಟ್ಟರು. ಈ ವೇಳೆ ಸೆಲ್ಫಿಗೆ ಮುಗಿಬಿದ್ದು ನೂಕಾಟ ನಡೆದು ಕೋಪಗೊಂಡ ದಂಪತಿ ಅಲ್ಲಿಂದ ನಿರ್ಗಮಿಸಿದರು.
Last Updated : Feb 3, 2023, 8:38 PM IST