ಟೀ.ನರಸೀಪುರ ವಾಟರ್ ಫಿಲ್ಟರ್ ಹೌಸ್ನಲ್ಲಿ ಕ್ಲೋರೈಡ್ ಅನಿಲ ಸೋರಿಕೆ: ತಪ್ಪಿದ ಅನಾಹುತ - ವಾಟರ್ ಫಿಲ್ಟರ್ ಹೌಸ್
🎬 Watch Now: Feature Video
ಮೈಸೂರು: ಟೀ.ನರಸೀಪುರ ವಾಟರ್ ಫಿಲ್ಟರ್ ಹೌಸ್ನಲ್ಲಿ ಕ್ಲೋರೈಡ್ ಅನಿಲ ಸೋರಿಕೆಯಾಗಿದ್ದು, ಪುರಸಭೆ ಅಧಿಕಾರಿಗಳ ಮುಂಜಾಗ್ರತಾ ಕ್ರಮದಿಂದ ಭಾರಿ ಅನಾಹುತ ತಪ್ಪಿದೆ. ಕಳೆದ ಬಾರಿಯೂ ಇಲ್ಲಿ ಅನಿಲ ಸೋರಿಕೆಯಾಗಿತ್ತು. ಇದೀಗ ಮತ್ತೊಮ್ಮೆ ಅದೇ ಸ್ಥಳದಲ್ಲಿ ಅನಿಲ ಸೋರಿಕೆ ಹಿನ್ನೆಲೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ, ಅನಿಲ ಸೋರಿಕೆ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳದಲ್ಲೇ ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳು ಮೊಕ್ಕಂ ಹೂಡಿದ್ದು, ಸುತ್ತಮುತ್ತಲಿನ ನಿವಾಸಿಗಳನ್ನ ಬೇರೆಡೆ ಸ್ಥಳಾಂತರಿಸಲಾಗಿದೆ. ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ನಮಗೆ ಸಹಕಾರ ನೀಡಿದ್ದಾರೆ. ನರಸೀಪುರ ಜನತೆ ಭಯ ಪಡುವ ಅಗತ್ಯವಿಲ್ಲ ಎಂದು ಪುರಸಭೆ ಸದಸ್ಯ ನಂಜುಂಡಸ್ವಾಮಿ ಹೇಳಿದರು.
Last Updated : Feb 3, 2023, 8:31 PM IST