ಖಡ್ಗ ಹಿಡಿದು ಗರ್ಬಾ ಡ್ಯಾನ್ಸ್ ಮಾಡಿದ ಮಹಿಳೆಯರು.. ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video
ಗುಜರಾತ್ : ನವರಾತ್ರಿಯ ವಿಶೇಷ ಆಚರಣೆಗಳೊಂದಿಗೆ ಗರ್ಬಾ ನೃತ್ಯವನ್ನು ಮಾಡುತ್ತಾರೆ. ಆದರೆ ಪಟಾನ್ ಮತ್ತು ಭರೂಚ್‌ನಲ್ಲಿ ಮಹಿಳೆಯರು ಖಡ್ಗಗಳನ್ನು ಹಿಡಿದು ಗರ್ಬಾ ನೃತ್ಯ ಮಾಡಿದ್ದಾರೆ. ಕ್ಷತ್ರಿಯ ಸಮುದಾಯದ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಖಡ್ಗ ಹಿಡಿದುಕೊಂಡು ಗರ್ಬಾ ನೃತ್ಯವನ್ನು ಮಾಡಿದರು. ಅಲ್ಲದೆ ಭರೂಚ್ನಲ್ಲಿಯೂ ಮಹಿಳೆಯರು ನೃತ್ಯ ಮಾಡುವಾಗ ವಿವಿಧ ರೀತಿಯಲ್ಲಿ ಖಡ್ಗಗಳನ್ನು ಝಳಪಿಸಿದರು. ಇದೊಂದು ವಿಶೇಷ ಆಚರಣೆಯಾಗಿದ್ದು ಶೌರ್ಯದ ಸಂಕೇತ ಎಂಬ ಭಾವನೆ ಇವರದ್ದಾಗಿದೆ. ಈ ರೀತಿ ಖಡ್ಗ ಹಿಡಿದು ನೃತ್ಯ ಮಾಡುವಾಗ ಯಾರಿಗೂ ಗಾಯವಾಗದಂತೆ ವಿಶೇಷ ಕಾಳಜಿ ವಹಿಸಲಾಗಿತ್ತು.
Last Updated : Feb 3, 2023, 8:28 PM IST