Watch.. ಕಳೆದ 9 ವರ್ಷಗಳಿಂದ ಮುಸ್ಲಿಂ ಯುವಕನಿಂದ ಗರ್ಬಾ ಆಯೋಜನೆ: ಕೋಮು ಸೌಹಾರ್ದತೆಗೆ ಸಾಕ್ಷಿ ಜುನಾಗಢ - ETV Bharat Karnataka
🎬 Watch Now: Feature Video
Published : Oct 19, 2023, 4:20 PM IST
ಜುನಾಗಢ (ಗುಜರಾತ್) : ಗುಜರಾತ್ನ ಮೂಲೆ ಮೂಲೆಯಲ್ಲೂ ನವರಾತ್ರಿಯ ಸಮಯದಲ್ಲಿ ಆಯೋಜಿಸುವ ಜಾನಪದ ನೃತ್ಯ ಪ್ರಕಾರವಾದ 'ಗರ್ಬಾ' ಹಿಂದೂ ಸಂಪ್ರದಾಯದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡಿದೆ. ಈ ಸಂಪ್ರದಾಯವನ್ನು ಇದೀಗ ಜುನಾಗಢದ ನಂದನವನ ಪ್ರದೇಶದಲ್ಲಿ ಸಿಕಂದರ್ ಹಾಲಾ ಎಂಬ ಮುಸ್ಲಿಂ ಯುವಕ ಕಳೆದ 9 ವರ್ಷಗಳಿಂದ ಆಯೋಜನೆ ಮಾಡಿಕೊಂಡು ಬರುತ್ತಿರುವುದು ಕೋಮು ಸೌಹಾರ್ದತೆಗೆ ಸಾಕ್ಷಿ ಆಗಿದೆ.
ಸಿಕಂದರ್ ಹಾಲಾ ಅವರು ಆಧ್ಯ ಶಕ್ತಿ ಗರ್ಭ ಮಂಡಲವನ್ನು ನವರಾತ್ರಿ ಒಂಬತ್ತು ದಿನಗಳ ಕಾಲ ಸ್ಥಾಪಿಸುತ್ತಾ ಬಂದಿದ್ದಾರೆ. ಇದರಲ್ಲಿ ಇಡೀ ಸಮಾಜದ ಚಿಕ್ಕ ಚಿಕ್ಕ ಹೆಣ್ಣು ಮಕ್ಕಳು ಪಾಲ್ಗೊಂಡು ಗರ್ಬಾದ ಸುತ್ತ ನೃತ್ಯ ಮಾಡುತ್ತಾ ತಿರುಗುತ್ತಾರೆ. ಒಂಬತ್ತು ದಿನಗಳಲ್ಲಿ ಗರ್ಬಾವನ್ನು ಆಯೋಜಿಸಲು ತಗಲುವ ವೆಚ್ಚವನ್ನು ವೈಯಕ್ತಿಕವಾಗಿ ಭರಿಸುವ ಮೂಲಕ ಸಿಕಂದರ್ ಹಾಲಾ ಅವರು ಏಕತೆಗೆ ಉದಾಹರಣೆಯಾಗಿ ನಿಂತಿದ್ದಾರೆ. ಇನ್ನು ಈ ಆಯೋಜನೆಗೆ ಸುತ್ತಮುತ್ತಲಿನ ಜನರಿಂದಲೂ ಬೆಂಬಲ ಸಿಕ್ಕಿರುವುದು ಸ್ವಾಗತಾರ್ಹ ಎಂದು ಹೇಳಬಹುದು.
ಇದನ್ನೂ ಓದಿ : ಬಮುಮುಖ ಪ್ರತಿಭೆ ಸಿಮ್ರನ್ ಅಹುಜಾ ನೃತ್ಯಕ್ಕೆ ಮನಸೋತ ಪ್ರೇಕ್ಷಕರು - ದಾಂಡಿಯಾ ವಿಡಿಯೋ ನೋಡಿ