ಮಹಿಳಾ ಮಣಿಗಳಿಂದ ತುಂಬಿ ತುಳುಕುತ್ತಿದ್ದ ಬಸ್.. ವಾಹನ ಏರಲು ನಿರಾಕರಿಸಿ ಕಣ್ನೀರಿಟ್ಟ ಬಾಲಕ: ವಿಡಿಯೋ - ಗದಗ ನ್ಯೂಸ್
🎬 Watch Now: Feature Video
ಗದಗ: ಬಸ್‌ಗಳೆಲ್ಲ ಮಹಿಳಾ ಮಣಿಗಳಿಂದ ತುಂಬಿ ತುಳುಕುತ್ತಿದ್ದ ಹಿನ್ನೆಲೆ ಬಾಲಕನೊಬ್ಬ ಬಸ್ ಏರಲು ನಿರಾಕರಿಸಿ ಕಣ್ಣೀರು ಹಾಕಿದ ಘಟನೆ ಗದಗ ತಾಲೂಕಿನ ದಾವಲ್ ಮಲ್ಲಿಕ್ ದರ್ಗಾದಲ್ಲಿ ನಡೆದಿದೆ. ಬಾಲಕ ತನ್ನ ತಾಯಿ ಜತೆಗೆ ದಾವಲ್ ಮಲ್ಲಿಕ್ ದರ್ಗಾ ನೋಡಲು ಬಂದಿದ್ದ. ವೀಕೆಂಡ್ ಹಾಗೂ ಅಮಾವಾಸ್ಯೆ ಹಿನ್ನೆಲೆ ಬಸ್‌ಗಳೆಲ್ಲ ಮಹಿಳೆಯರಿಂದ ಭರ್ತಿ ಆಗಿ ಬರುತ್ತಿದ್ದವು.
ಇದನ್ನೂ ಓದಿ: Shakti Scheme: ಮೊದಲ ವಾರ 3 ಕೋಟಿಗೂ ಹೆಚ್ಚು ಮಹಿಳೆಯರಿಂದ ಉಚಿತ ಪ್ರಯಾಣ: ಟಿಕೆಟ್ ಮೌಲ್ಯವೆಷ್ಟು ಗೊತ್ತಾ?
ಕಾದು ಕಾದು ಸುಸ್ತಾದ ಬಾಲಕ ಎಲ್ಲಾ ಬಸ್ಗಳು ಭರ್ತಿಯಾಗಿ ಹೋಗುತ್ತಿರುವುದನ್ನು ನೋಡಿ ಕಣ್ಣೀರು ಹಾಕತೊಡಗಿದ. ಅಲ್ಲದೇ ಈ ನೂಕು ನುಗ್ಗಲಿನಲ್ಲಿ ನಾನು ಬರುವುದಿಲ್ಲ ಎಂದು ಹಠ ಹಿಡಿದಿದ್ದ. ಬಾಲಕನನ್ನು ಸಮಾಧಾನ ಮಾಡಲು ತಾಯಿ ಹರಸಾಹಸ ಪಡಬೇಕಾಯಿತು. ಭಾನುವಾರ ಹಾಗೂ ಅಮಾವಾಸ್ಯೆ ಹಿನ್ನೆಲೆ ದಾವಲ್ ಮಲ್ಲಿಕ್ ದರ್ಗಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಎಲ್ಲಿ ನೋಡಿದರು ಮಹಿಳೆಯರೇ ಕಾಣಸಿಗುತ್ತಿದ್ದರು. ಅಪಾರ ಪ್ರಮಾಣದಲ್ಲಿ ಸೇರಿದ್ದರಿಂದ ಬಸ್‌ಗಳೆಲ್ಲ ಭರ್ತಿಯಾಗಿದ್ದವು.
ಇದನ್ನೂ ಓದಿ: ಮಣ್ಣೆತ್ತಿನ ಅಮಾವಾಸ್ಯೆ-ಚಾಮುಂಡಿ ಬೆಟ್ಟದಲ್ಲಿ ಸ್ತ್ರೀ ಸಾಗರ: ವಿಡಿಯೋ