ಸಕಲ ಸೇನಾ ಗೌರವದೊಂದಿಗೆ ಹುತಾತ್ಮ ಯೋಧ ಸೇವಾಕ್ ಸಿಂಗ್ ಅಂತ್ಯಕ್ರಿಯೆ: ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video

ಬಠಿಂಡಾ: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಗುರುವಾರ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಐವರು ಯೋಧರಲ್ಲಿ ಸೇವಾಕ್ ಸಿಂಗ್ ಒಬ್ಬರು. ಅವರ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರಾದ ಪಂಜಾಬ್ನ ಬಠಿಂಡಾದ ಬಾಘಾದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು. ರಾಷ್ಟ್ರೀಯ ರೈಫಲ್ ಪಡೆಯ ಯೋಧರ ವಾಹನದ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು. ದಾಳಿಯಲ್ಲಿ ಸೈನಿಕರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಐವರು ಯೋಧರು ಸ್ಥಳದಲ್ಲೇ ಹುತಾತ್ಮರಾಗಿದ್ದರು.
ಹುತಾತ್ಮ ಯೋಧರಲ್ಲಿ ಒಬ್ಬರಾದ ಸೇವಾಕ್ ಸಿಂಗ್ರ ಅಂತ್ಯಕ್ರಿಯೆಯನ್ನು ಸ್ವಗ್ರಾಮವಾದ ಬಠಿಂಡಾದ ಬಾಘಾದಲ್ಲಿ ಸಕಲಾ ಸೇನಾ ಗೌರವದೊಂದಿಗೆ ಇಂದು ನೆರವೇರಿಸಲಾಯಿತು. ಅಂತ್ಯಕ್ರಿಯೆ ವೇಳೆ ಸೇವಾಕ್ ಸಿಂಗ್ರ ತಂದೆಗೆ ರಾಷ್ಟ್ರೀಯ ಧ್ವಜ ಹಸ್ತಾಂತರಿಸಲಾಯಿತು. ಎಎಪಿ ಶಾಸಕಿ ಬಲ್ಜಿಂದರ್ ಕೌರ್, ಗ್ರಾಮದ ಜನರು ಮತ್ತು ಕುಟುಂಬಸ್ಥರು ಯೋಧನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಶಹೀದ್ ಸೇವಕ್ ಸಿಂಗ್ ಅವರು 5 ವರ್ಷಗಳ ಹಿಂದೆ ಅಂದರೆ 2018ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು. ಸೇವಕ್ ಸಿಂಗ್ ಮನೆಗೆ ಏಕೈಕ ಪುತ್ರರಾಗಿದ್ದರು. ಇವರಿಗೆ ಇಬ್ಬರು ಸಹೋದರಿಯರೂ ಇದ್ದಾರೆ. 20 ದಿನಗಳ ಹಿಂದೆ ಸೇವಕ್ ಸಿಂಗ್ ರಜೆ ಮುಗಿಸಿ ಸೇನೆಗೆ ಹಿಂತಿರುಗಿದ್ದರು. ಹುತಾತ್ಮರಾದ 5 ಯೋಧರಲ್ಲಿ 4 ಜನ ಪಂಜಾಬ್ ರಾಜ್ಯಕ್ಕೆ ಸೇರಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.
ಇದನ್ನೂ ಓದಿ: ಗ್ರೆನೇಡ್ ದಾಳಿಯಲ್ಲಿ ಐವರು ಯೋಧರು ಹುತಾತ್ಮ: ಉಗ್ರರ ಬೇಟೆಗೆ ಕಾರ್ಯಾಚರಣೆ