ನೀಲಗಾಯ್ ಉಳಿಸಲು ಹೋಗಿ ಅಪಘಾತ..ಒಂದೇ ಕುಟುಂಬದ ನಾಲ್ವರ ಸಾವು - Postmortem examination
🎬 Watch Now: Feature Video


Published : Dec 13, 2023, 10:43 PM IST
ಪಟಾನ್ (ಗುಜರಾತ್): ಜಿಲ್ಲೆಯ ಸಂತಾಲ್‌ಪುರ ತಾಲೂಕಿನ ಫಂಗ್ಲಿ ಗ್ರಾಮದ ಜೋಶಿ ಕುಟುಂಬ ಬುಧವಾರ ಬೆಳಗ್ಗೆ ಅಡೆಸ್ಸಾರ್‌ನ ಗೊಗದಾರ ಗ್ರಾಮಕ್ಕೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಜೋಶಿ ಕುಟುಂಬದ ಮಹೇಂದ್ರಭಾಯಿ ಅವರು ಕಾರು ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಫಂಗಲಿ-ಚರಂಕ ನಡುವಿನ ರಸ್ತೆಯಲ್ಲಿ ನೀಲಗಾಯ್ ಕಾರಿಗೆ ಅಡ್ಡ ಬಂದಿದೆ. ಹೀಗಾಗಿ ಚಾಲಕ ತನ್ನ ನಿಯಂತ್ರಣ ಕಳೆದುಕೊಂಡಿದ್ದರಿಂದ ರಸ್ತೆ ಬದಿಯ ನೀರು ತುಂಬಿದ್ದ ಹೊಂಡಕ್ಕೆ ಬಿದ್ದಿದೆ. ಜೋಶಿ ಕುಟುಂಬಸ್ಥರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಅಡ್ಡ ಬಂದ ನೀಲಗಾಯ್ ಉಳಿಸಲು ಪ್ರಯತ್ನಿಸುವಾಗ ಮಹೇಂದ್ರಭಾಯಿ ಕಾರಿನ ಚಾಲನೆಯ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರಿಂದಾಗಿ ಕಾರು ರಸ್ತೆಯಿಂದ ಇಳಿದು ನೀರು ತುಂಬಿದ ಹಳ್ಳಕ್ಕೆ ಬಿದ್ದಿತ್ತು. ಮಹೇಂದ್ರಭಾಯಿ, ಕಾಂತಿಭಾಯಿಜೋಶಿ ಹಾಗೂ ಅವರ ಪತ್ನಿ ಭಾವನಾಬೆನ್ ಜೋಶಿ, ಅವರ 13 ವರ್ಷದ ಮಗಳು ದಿಶಾ ಜೋಶಿ ಮತ್ತು 15 ವರ್ಷದ ಊರ್ವಶಿ ಜೋಶಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬುಧವಾರ ಬೆಳಗ್ಗೆ ಗಾಮಖ್ವಾರ್ ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಂತಾಲ್‌ಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದಿದ್ದಾರೆ. ಕುಟುಂಬಸ್ಥರು, ಗ್ರಾಮದ ಜನರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು.
ಇದನ್ನೂ ಓದಿ : ರಾಮನಗರ: ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣ; ಇಬ್ಬರ ಸಾವು, ಐವರಿಗೆ ಗಾಯ