ಅಚ್ಚರಿ ಮೂಡಿಸಿದ ನಾಲ್ಕು ಕಾಲುಗಳ ಕೋಳಿ ಮರಿ: ವಿಡಿಯೋ ನೋಡಿ - ಅಪರೂಪದ ಕೋಳಿಮರಿ
🎬 Watch Now: Feature Video
Published : Oct 30, 2023, 5:23 PM IST
ರಾಮನಗರ: ನಾಲ್ಕು ಕಾಲುಗಳ ಕೋಳಿ ಮರಿ ಜನನವಾಗಿರುವ ವಿಲಕ್ಷಣ ಘಟನೆ ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ರಾಮನಗರ ಜಿಲ್ಲೆ ಕನಕಪುರ ಬಳಿಯ ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ಮಲ್ಲೇನಹಳ್ಳಿ ಗ್ರಾಮದ ಮುನಿರಾಜು ಎಂಬುವರ ಮನೆಯಲ್ಲಿ ನಾಲ್ಕು ಕಾಲುಗಳು ಇರುವ ಕೋಳಿ ಮರಿ ಮೊಟ್ಟೆಯಿಂದ ಹೊರಬಂದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಮಲ್ಲೇನಹಳ್ಳಿ ಮುನಿರಾಜು ರೈತರಾಗಿದ್ದು, ಉಪಕಸುಬಾಗಿ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಇತ್ತೀಚಿಗೆ ಕೋಳಿಯೊಂದು ಇಟ್ಟಿದ್ದ 15ಕ್ಕೂ ಹೆಚ್ಚು ಮೊಟ್ಟೆಗಳಿಗೆ ಕಳೆದ 20 ದಿನಗಳಿಂದ ಕಾವು ಕೊಟ್ಟಿತ್ತು. ಮೊಟ್ಟೆಗಳು ಒಡೆದು ಮರಿಗಳು ಹೊರಬಂದಿದ್ದು, ಅದರಲ್ಲಿ ನಾಲ್ಕು ಕಾಲುಗಳುಳ್ಳ ಕೋಳಿ ಮರಿಯೂ ಜನನವಾಗಿದೆ. ಇದನ್ನು ಕಂಡು ಮುನಿರಾಜು ಅಚ್ಚರಿಗೊಂಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಅಕ್ಕ ಪಕ್ಕದ ಗ್ರಾಮಸ್ಥರು ಮುಗಿಬಿದ್ದು ಕೋಳಿಮರಿಯನ್ನು ನೋಡಲು ಬರುತ್ತಿದ್ದಾರೆ.
ಸಾಮಾನ್ಯವಾಗಿ ಕೋಳಿಗಳಿಗೆ ಎರಡು ಕಾಲು ಮಾತ್ರ ಇರುತ್ತವೆ. ಆದ್ರೆ ಈ ಮರಿಗೆ ಪಕ್ಕದಲ್ಲಿ ಮತ್ತೆರಡು ಚಿಕ್ಕ ಕಾಲುಗಳು ಇವೆ. ಇದೊಂದು ಅಪರೂಪದ ಕೋಳಿಮರಿ. ನಾಲ್ಕು ಕಾಲುಗಳಲ್ಲೂ ಚಲನವಲನ ಇರುವುದು ಸಾರ್ವಜನಿಕರಿಗೆ ಕುತೂಹಲ ಮೂಡಿಸಿದೆ.
ಇದನ್ನೂ ನೋಡಿ : ಯಾರಿಗೇನು ಕಮ್ಮಿ ಇಲ್ಲ: 15 ಟನ್ ಕಬ್ಬು ತುಂಬಿದ ಟ್ರ್ಯಾಕ್ಟರ್ ಚಲಾಯಿಸಿ ಗಮನ ಸೆಳೆದ ಮಹಿಳೆ - ವಿಡಿಯೋ