ತಿಳಿಯದ ಭಾಷೆ.. ಚಾಲಕ ಹಿಂದೆ ಕೂರಿಸಿ ತಾನೇ ರಿಕ್ಷಾ ತುಳಿದ ವಿದೇಶಿ ಪ್ರವಾಸಿ - ಈಟಿವಿ ಭಾರತ ಕನ್ನಡ ನ್ಯೂಸ್
🎬 Watch Now: Feature Video
ಜಲಂಧರ್ (ಪಂಜಾಬ್): ಕಳೆದ ರಾತ್ರಿ ಜಲಂಧರ್‌ನ ರಣಕ್ ಬಜಾರ್ ಪ್ರದೇಶದಲ್ಲಿ ವಿದೇಶಿ ವ್ಯಕ್ತಿಯೊಬ್ಬರು ಸೈಕಲ್ ರಿಕ್ಷಾ ಓಡಿಸುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ವಿದೇಶಿ ವ್ಯಕ್ತಿ ಸೈಕಲ್ ರಿಕ್ಷಾ ಓಡಿಸುವಾಗ ರಿಕ್ಷಾ ಚಾಲಕನು ಹಿಂದಿನ ಸೀಟಿನಲ್ಲಿ ಕುಳಿತಿದ್ದಾನೆ. ಈತನ ಜೊತೆಗೆ ಹಿಂದೆ ಕುಳಿತಿದ್ದ ವಿದೇಶಿಗನ ಪತ್ನಿ ವಿಡಿಯೋ ಮಾಡುತ್ತಿದ್ದರು. ಇನ್ನು ಈ ಬಗ್ಗೆ ಮಾತನಾಡಿರುವ ರಿಕ್ಷಾವಾಲ ರತನ್ ಲಾಲ್, ನಿನ್ನೆ ರಾತ್ರಿ ರಣಕ್ ಬಜಾರ್‌ನಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದಾಗ, ವಿದೇಶಿ ಗಂಡ ಮತ್ತು ಹೆಂಡತಿ ನನ್ನ ಬಳಿಗೆ ಬಂದು ಒಂದೆಡೆ ತೆರಳಲು ಹೇಳಿದರು. ನನಗೆ ಇಂಗ್ಲಿಷ್ ಬಾರದ ಹಿನ್ನೆಲೆ ನಾನು ತಡವರಿಸಿದೆ. ಈ ಸಂದರ್ಭ ವಿದೇಶಿಗರಿಗೆ ಪಂಜಾಬಿ ಬಾರದು. ಬಳಿಕ ವಿದೇಶಿ ವ್ಯಕ್ತಿ ಸ್ವತಃ ತಾನೇ ರಿಕ್ಷಾ ಚಲಾಯಿಸಿಕೊಂಡು ತೆರಳಿದ್ದಾನೆ. ವಿದೇಶಿಗನೇ ರಿಕ್ಷಾ ಚಲಾಯಿಸಿದರೂ ಬಳಿಕ ರತನ್ ಲಾಲ್ಗೆ ನೂರು ರೂಪಾಯಿಗಳನ್ನು ಕೊಟ್ಟು ಹೋಗಿದ್ದಾನೆ. ಈ ಘಟನೆಯನ್ನು ನಾನು ಎಂದಿಗೂ ಮರೆಯುವುದಿಲ್ಲ ರಿಕ್ಷಾವಾಲ ರತನ್ಲಾಲ್ ಹೇಳಿದ್ದಾನೆ.
Last Updated : Feb 3, 2023, 8:29 PM IST