ಕಾಡಿನಲ್ಲಿ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದ ವಿದೇಶಿ ಪ್ರವಾಸಿಗ: ವಿಡಿಯೋ! - ಉತ್ತರಾಖಂಡ

🎬 Watch Now: Feature Video

thumbnail

By

Published : Apr 11, 2023, 2:01 PM IST

ರಾಮನಗರ(ಉತ್ತರಾಖಂಡ): ಇಲ್ಲಿನ ಕೋಸಿ ನದಿಯ ದಡದ ಅರಣ್ಯದಲ್ಲಿ ವಿದೇಶಿ ಪ್ರಜೆಯೊಬ್ಬರು ಟೆಂಟ್‌ನಲ್ಲಿ ವಾಸಿಸುತ್ತಿದ್ದರು. ಮಾಹಿತಿ ಪಡೆದು ಸ್ಥಳಕ್ಕೆ ತೆರಳಿ ದಾಖಲೆಗಳನ್ನು ಪರಿಶೀಲಿಸಿದಾಗ ಆತ ಸ್ವೀಡನ್ ಪ್ರಜೆ ಎಂಬುವುದು ಗೊತ್ತಾಗಿದೆ. ವೀಸಾ ಮತ್ತು ಪಾಸ್‌ಪೋರ್ಟ್ ಪರಿಶೀಲನೆ ಮಾಡಲಾಗಿದೆ. ಅವರು ಫೆ.2024ರ ವರೆಗೆ ವೀಸಾದೊಂದಿಗೆ ಭಾರತ ಪ್ರವಾಸಕ್ಕೆ ಬಂದವರು. ಸದ್ಯ ಮುಂದಿನ ಪ್ರವಾಸಕ್ಕೆ ತೆರಳಿದ್ದಾರೆ ಎಂದು ರಾಮನಗರ ಪೋಲಿಸ್ ಅಧಿಕಾರಿ ಅರುಣ್ ಕುಮಾರ್ ಸೈನಿ ಮಾಹಿತಿ ನೀಡಿದ್ದಾರೆ.

ಪ್ರಕರಣದ ವಿವರ: ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ರಾಮನಗರದ ಕೋಸಿ ನದಿಯ ದಡದ ಸಮೀಪದ ಕಾಡಿನಲ್ಲಿ ಯುವಕನೊಬ್ಬ ಟೆಂಟ್‌ನಲ್ಲಿ ವಾಸಿಸುತ್ತಿದ್ದಾನೆ ಎಂದು ರಾಮನಗರ ಅರಣ್ಯ ವಿಭಾಗದ ಸಿಬ್ಬಂದಿ ಮಾಹಿತಿ ಬಂದಿದೆ. ಅರಣ್ಯ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ತೆರಳಿದಾಗ ಯುವಕ ಕೋಸಿ ನದಿಯಲ್ಲಿ ಸ್ನಾನ ಮಾಡುತ್ತಿರುವುದು ಕಂಡು ಬಂದಿದೆ. ಆ ವೇಳೆ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಯುವಕನನ್ನು ವಿಚಾರಿಸಿದಾಗ 5 ದಿನಗಳಿಂದ ಕೋಸಿ ನದಿ ದಡದಲ್ಲಿರುವ ಈ ಪ್ರದೇಶದಲ್ಲಿ ವಾಸವಾಗಿರುವುದಾಗಿ ತಿಳಿಸಿದ್ದಾರೆ. ಅವರು ಸ್ವೀಡನ್ ಪ್ರಜೆ ಮತ್ತು ಅವರ ಹೆಸರು ಪೊಹ್ಜಾಲ್ನೆನ್ ಎಂದು ಹೇಳಿದರು. ಅಲ್ಲದೇ ಅವರ ವೀಸಾ ಮತ್ತು ಪಾಸ್‌ಪೋರ್ಟ್ ಕ್ರಮಬದ್ಧವಾಗಿರುವುದು ಕೂಡಾ ಕಂಡು ಬಂದಿದೆ.

ಪೊಹ್ಜಾಲ್ನೆನ್ ಫೆಬ್ರವರಿ 2024 ರವರೆಗೆ ವೀಸಾದೊಂದಿಗೆ ಭಾರತಕ್ಕೆ ಭೇಟಿ ನೀಡಲು ಬಂದಿದ್ದು, ಭಾರತದ ಹಲವು ಭಾಗಗಳಿಗೆ ಭೇಟಿ ನೀಡಿದ್ದಾಗಿ ಹೇಳಿದರು. ಸದ್ಯ ರಾಮನಗರದಲ್ಲಿ 5 ದಿನಗಳಿಗಿಂತ ಹೆಚ್ಚು ಸಮಯ ಕಳೆದಿರುವುದಾಗಿ ತಿಳಿಸಿದ್ದಾರೆ. ಇದು ಹುಲಿಗಳು ಹೆಚ್ಚಾಗಿರುವ ಪ್ರದೇಶ. ಯಾವುದೇ ಸಮಯದಲ್ಲಾದರೂ ಅವಘಡ ಸಂಭವಿಸಬಹುದು. ಆದ್ದರಿಂದ, ಸುರಕ್ಷಿತ ಸ್ಥಳಕ್ಕೆ ಹೋಗಿ ಎಂದು ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಮನವೊಲಿಸಿದ್ದಾರೆ. ಬಳಿಕ ಆತ ಮುಂದಿನ ಪ್ರವಾಸಕ್ಕೆ ತೆರಳಿದ್ದಾನೆ ಎಂದು ತಿಳಿದು ಬಂದಿದೆ. ಮತ್ತೊಂದೆಡೆ ಈ ವಿದೇಶಿ ಪ್ರವಾಸಿಗ ಹಾಡಿಗೆ ನೃತ್ಯ ಮಾಡುವ ವಿಡಿಯೋ ಕೂಡ ವೈರಲ್ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.