ಕಾಂಗ್ರೆಸ್ ಭದ್ರಕೋಟೆಗೆ ಕೇಸರಿ ಲಗ್ಗೆ: ಇದೇ ಮೊದಲ ಬಾರಿ ಮುಸ್ಲಿಂ ಕಾಲೊನಿಗಳಲ್ಲಿ ಮತಯಾಚನೆ

🎬 Watch Now: Feature Video

thumbnail

By

Published : May 3, 2023, 3:32 PM IST

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೆಲ ಕೇಂದ್ರ ನಾಯಕರು ಮುಸ್ಲಿಮರ ಬಗ್ಗೆ ಸಾಫ್ಟ್ ಕಾರ್ನರ್ ತೋರುತ್ತಿದ್ದಾರೆ. ಇತ್ತ ಮುಸ್ಲಿಂ ಮತಗಳೇ ನಮಗೆ ಬೇಡ ಎಂದು ಖಡಾಖಂಡಿತವಾಗಿ ಹೇಳುತ್ತಿದ್ದ ಬಿಜೆಪಿ ನಾಯಕರುಗಳು ಇದೀಗ ಮಸೀದಿ ದರ್ಗಾಗಳಿಗೆ ತೆರಳಿ ಮುಖಂಡರನ್ನು ಭೇಟಿಯಾಗುವ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಅದರಲ್ಲೂ ಅಚ್ಚರಿ ಎಂಬಂತೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಚುನಾವಣೆಯಲ್ಲೂ ಮುಸ್ಲಿಮರ ಮತ ಕೇಳದ ಬಿಜೆಪಿ ಅಭ್ಯರ್ಥಿಗಳು ಅಚ್ಚರಿಯಂತೆ ನಮಗೆ ಆಶೀರ್ವಾದ ಮಾಡಿ ಎಂದು ಮುಸ್ಲಿಂ ಮತದಾರರ ಬಳಿ ತೆರಳಿದ್ದಾರೆ. 

ಚುನಾವಣಾ ಗೆಲುವಿಗೆ ನಿರ್ಣಾಯಕವಾಗಿರುವ 83 ಸಾವಿರ ಮುಸ್ಲಿಂ ಮತಗಳು ಇಲ್ಲಿದ್ದು, ಆ ಮುಸ್ಲಿಂ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಇತಿಹಾಸದಲ್ಲೇ ಮೊಲದ ಬಾರಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮುಸ್ಲಿಂ ಕಾಲೊನಿಗಳಲ್ಲಿ ಬಿಜೆಪಿ ಅಭ್ಯರ್ಥಿ ಬಿಜಿ ಅಜಯ್ ಕುಮಾರ್ ಅವರು ಮತಯಾಚಿಸಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. 2008 ರಲ್ಲಿ ಕ್ಷೇತ್ರ ವಿಂಗಡಣೆಯಾದಾಗಿನಿಂದಲೂ ಇಲ್ಲಿನ ಜನ ಕಾಂಗ್ರೆಸ್ ಕೈ ಹಿಡಿಯುತ್ತಾ ಬಂದಿದ್ದಾರೆ. 

ಸತತ ಮೂರು ಬಾರಿ ಶಾಮನೂರು ಶಿವಶಂಕರಪ್ಪ ಇಲ್ಲಿ ಜಯಭೇರಿ ಬಾರಿಸುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್​ಗೆ ಠಕ್ಕರ್ ಕೊಡಲು ಮುಸ್ಲಿಂರ ಮತಗಳನ್ನು ಸೆಳೆಯಲು ಬಿಜೆಪಿ ಪ್ಲಾನ್ ಮಾಡಿ ಬೃಹತ್ ರೋಡ್ ಶೋ ಆರಂಭಿಸಿದೆ. ಸಂಸದ ಜಿಎಂ ಸಿದ್ದೇಶ್ವರ್ ಅವರ ನೇತೃತ್ವದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಬಿಜಿ ಅಜಯ್ ಕುಮಾರ್ ಅವರು ತೆರೆದ ವಾಹನದಲ್ಲಿ ನಿಂತು ಮತಯಾಚನೆ ಮಾಡಿದರು. ಭಾಷಾ ನಗರ, ಅಝಾದ್ ನಗರ, ಇಮಾಂ ನಗರ, ಅಹ್ಮದ್ ನಗರ, ಮೆಹೆಬೂಬ್ ನಗರ, ರಿಂಗ್ ರಸ್ತೆ ಹೀಗೆ ಸಾಕಷ್ಟು ಕಾಲೊನಿಗಳ ಮೂಲಕ ರೋಡ್ ಶೋ ಮಾಡಿ ಅಚ್ಚರಿ ಎಂಬಂತೆ ಮತಯಾಚಿಸಿದ್ದು ಹುಬ್ಬೇರಿಸುವಂತಾಗಿತ್ತು. 

ಇದನ್ನೂ ಓದಿ: ಮಂಡ್ಯ ಅಭ್ಯರ್ಥಿ ಪರ ಪ್ರಿಯಾಂಕಾ ಗಾಂಧಿ ಅಬ್ಬರದ ಪ್ರಚಾರ : ಕೈ ನಾಯಕಿಗೆ ಸಾವಯವ ಬೆಲ್ಲ, ಕೃಷ್ಣನ ವಿಗ್ರಹ ಗಿಫ್ಟ್

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.