ಹೋಳಿ ಹಬ್ಬ: ಅಹಮದಾಬಾದ್ ಜಗನ್ನಾಥ ದೇಗುಲದಲ್ಲಿ ರಂಗೇರಿದ ಪುಷ್ಪ ರಂಗೋತ್ಸವ.. - 500 ಕೆಜಿ ವಿವಿಧ ಬಣ್ಣದ ಹೂವು
🎬 Watch Now: Feature Video
ಅಹಮದಾಬಾದ್(ಗುಜರಾತ್): ಹೋಳಿ ಹಬ್ಬದ ಪ್ರಯುಕ್ತ ನಗರದ ಜಗನ್ನಾಥ ದೇವಾಲಯದಲ್ಲಿ ಪುಷ್ಪ ರಂಗೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಪಾರ ಜನಸ್ತೋಮ ಸೇರಿತ್ತು.
ಪ್ರತಿ ವರ್ಷದಂತೆ ಜಗನ್ನಾಥನ ಸಹೋದರ ಬಲರಾಮ, ಸಹೋದರಿ ಸುಭದ್ರೆಗೆ ಸಾಂಪ್ರದಾಯಿಕ ಬೆಳ್ಳಿಯ ಬಣ್ಣ ಹಾಕಲಾಯಿತು. ಜಗನ್ನಾಥ ದೇವರಿಗೆ ಕೇಶುದ ಬಣ್ಣ ಮತ್ತು ವಿವಿಧ ಬಣ್ಣಗಳು ಮತ್ತು ಹೂವುಗಳಿಂದ ದೇವಾಲಯದ ಮಹಂತ್ ದಿಲೀಪ್ ದಾಸ್ಜಿ ಮಹಾರಾಜ್, ದೇವಾಲಯದ ಟ್ರಸ್ಟಿ, ಮಹೇಂದ್ರ ಝಾ ಮತ್ತು ಸಾಧು ಸಂತರು ಬಣ್ಣ ಹಚ್ಚಿದರು. ಪುಷ್ಪ ರಂಗೋತ್ಸವಕ್ಕೆ 500 ಕೆಜಿಯಷ್ಟು ಗುಲಾಬಿ, ಸೂರ್ಯಕಾಂತಿ ಮತ್ತು 500 ಕೆಜಿ ವಿವಿಧ ಬಣ್ಣದ ಹೂವುಗಳನ್ನು ಬಳಸಲಾಯಿತು.
ಋಷಿಗಳು ಮತ್ತು ಸಂತರೊಂದಿಗೆ ಹೂವುಗಳ ಬಣ್ಣ ಮತ್ತು ಕೇಶುದ ನೀರಿನಿಂದ ಧೂಲೇಟಿಯ ಉತ್ಸವವನ್ನು ಆಚರಿಸಲಾಯಿತು. ರಂಗೋತ್ಸವದ ಮೊದಲು ಭಕ್ತರು ಜಗನ್ನಾಥನನ್ನು ನೋಡಲು ನೃತ್ಯ ಮಾಡುವರು. ನಂತರ ಜಗನ್ನಾಥ ಮತ್ತು ಋಷಿ ಸಂತರೊಂದಿಗೆ ಹೂವಿನ ಹಬ್ಬದಲ್ಲಿ ಭಾಗವಹಿಸುತ್ತಾರೆ.
ಭಗವಾನ್ ಜಗನ್ನಾಥನನ್ನು ನಗರ ದೇವತೆ ಹೊಸ ವರ್ಷದ ಆಷಾಢಿ ಬೀಜ ಮತ್ತು ಧೂಲೇತಿಯ ದಿನ ಅಹಮದಾಬಾದ್ ನಗರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಂದು ಧುಲೇತಿಯ ಶುಭ ದಿನ ಇದ್ದು, ಅಹಮದಾಬಾದ್ ನಗರದ ಜನರು ಪಾಲ್ಗೊಂಡಿದ್ದರು.
ಇದನ್ನೂಓದಿ:ಉಘೇ ಮಾದಪ್ಪ ಈಗ ಇನ್ನಷ್ಟು ಶ್ರೀಮಂತ.. ಮಹದೇಶ್ವರನಿಗೆ ಹರಿದುಬಂತು ಕೋಟಿ ಕೋಟಿ ಹಣ