ಬಟ್ಟೆ ತುಂಬಿದ ಲಾರಿಗೆ ಹಿಂದಿನಿಂದ ಸ್ಪಿರಿಟ್ ಲಾರಿ ಡಿಕ್ಕಿ: ಹೊತ್ತಿ ಉರಿದ ಲಾರಿಗಳು - ವಿಡಿಯೋ - ಹಾವೇರಿ ಸುದ್ದಿ
🎬 Watch Now: Feature Video
ಹಾವೇರಿ: ಬಟ್ಟೆ ತುಂಬಿದ ಲಾರಿಗೆ ಹಿಂದಿನಿಂದ ಸ್ಪಿರಿಟ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎರಡು ಲಾರಿಗಳು ಹೊತ್ತಿ ಉರಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಬಳಿ ನಡೆದಿದೆ. ಶಿಗ್ಗಾಂವಿ ಪಟ್ಟಣದ ರಂಭಾಪುರಿ ಕಾಲೇಜ್ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಬಟ್ಟೆ ತುಂಬಿದ ಲಾರಿಗೆ ಹಿಂದಿನಿಂದ ಸ್ಪಿರಿಟ್ ಲಾರಿ ಗುದ್ದಿದ ಪರಿಣಾಮ, ಸ್ಪಿರಿಟ್ ಸೋರಿಕೆಯಾಗಿ ಎರಡು ಲಾರಿಗಳಿಗೆ ಬೆಂಕಿ ಹತ್ತಿಕೊಂಡಿದೆ.
ಎರಡು ಲಾರಿಗಳು ಹುಬ್ಬಳ್ಳಿಯ ಕಡೆ ಹೋಗುತ್ತಿದ್ದವು ಎನ್ನಲಾಗಿದೆ. ಒಂದು ಲಾರಿ ಸಂಪೂರ್ಣವಾಗಿ ಗಾರ್ಮೆಂಟ್ಸ್ ಬಟ್ಟೆಗಳನ್ನು ತುಂಬಿಕೊಂಡು ಹೋಗುತ್ತಿತ್ತು. ಸ್ಪಿರಿಟ್ ಲಾರಿ ಏಕಾಏಕಿ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡು ಎರಡು ಲಾರಿಗಳು ಧಗಧಗನೆ ಹೊತ್ತಿ ಉರಿದಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಲಾರಿಯಲ್ಲಿದ್ದ ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿಗ್ಗಾಂವಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ತಡೆಗೋಡೆ ನಿರ್ಮಾಣದ ವೇಳೆ ಸಮುದ್ರಕ್ಕೆ ಉರುಳಿದ ಜೆಸಿಬಿ: ವಿಡಿಯೋ ವೈರಲ್