ಕಾರವಾರ ನೌಕಾನೆಲೆಯಲ್ಲಿ ಟಗ್ಗೆ ಬೆಂಕಿ: ಘಟನೆಯ ವಿಡಿಯೋ - ಟಗ್ ಬೋಟ್ ಎಂಜಿನ್‌ನಲ್ಲಿ ತಾಂತ್ರಿಕ ದೋಷ
🎬 Watch Now: Feature Video
ಕಾರವಾರ : ಐಎನ್‌ಎಸ್ ಕದಂಬ ನೌಕಾನೆಲೆಯ ಡಾಕ್ ಯಾರ್ಡ್ಗೆ ಯುದ್ದ ಹಡಗುಗಳನ್ನು ಎಳೆದು ತರುವ ಟಗ್ ಬೋಟ್‌ಗೆ ಬೆಂಕಿ ತಗುಲಿ ಹಾನಿಯಾದ ಘಟನೆ ಗುರುವಾರ ನಡೆಯಿತು. ಅರಗಾದಲ್ಲಿರುವ ಯಾರ್ಡ್ನಲ್ಲಿ ತೇಜ್ ಹೆಸರಿನ ಟಗ್ ಬೋಟ್‌ನ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಮಾತ್ರದಲ್ಲಿ ಬೋಟ್ ತುಂಬೆಲ್ಲ ಹೊಗೆ ಆವರಿಸಿಕೊಂಡಿತು. ತಕ್ಷಣ ನೌಕಾ ನೆಲೆ ಸಿಬ್ಬಂದಿ ಹಾಗೂ ಕಾರವಾರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು.
ಇದನ್ನೂ ಓದಿ: ಚಾರ್ಜಿಂಗ್ ಬಳಿಕ ಸ್ಟಾರ್ಟ್ ಮಾಡುತ್ತಿದ್ದಂತೆ ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್: ವಿಡಿಯೋ
ಲಕ್ಷಾಂತರ ಮೌಲ್ಯದ ವಸ್ತುಗಳಿಗೆ ಹಾನಿ : ಟಗ್ ಬೋಟ್ ಎಂಜಿನ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಈ ರೀತಿ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳಿಗೆ ಹಾನಿಯಾಗಿರುವ ಬಗ್ಗೆ ನೌಕಾನೆಲೆ ಮೂಲಗಳು ತಿಳಿಸಿವೆ. ಬೃಹತ್ ನೌಕೆಗಳನ್ನು ಡಾಕ್ ಯಾರ್ಡ್ಗೆ ಎಳೆದು ತರಲು ಟಗ್‌ಗಳು ಸಹಕಾರಿಯಾಗುತ್ತವೆ.
ಇದನ್ನೂ ಓದಿ: ವಿಜಯನಗರ: ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಟ್ರಕ್; ಚಾಲಕ ಪಾರು