ದೆಹಲಿ ಏಮ್ಸ್ನ 2ನೇ ಮಹಡಿಯಲ್ಲಿ ಬೆಂಕಿ, ವೈದ್ಯಕೀಯ ಪರಿಕರಗಳು ಸುಟ್ಟು ಕರಕಲು: ವಿಡಿಯೋ ನೋಡಿ - ದೆಹಲಿ ಏಮ್ಸ್ ಆಸ್ಪತ್ರೆ
🎬 Watch Now: Feature Video
ನವದೆಹಲಿ: ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಆಸ್ಪತ್ರೆಯ ಎಂಡೋಸ್ಕೋಪಿ ಕೊಠಡಿಯಲ್ಲಿ ಅಗ್ನಿ ಹೊತ್ತಿಕೊಂಡಿದ್ದು, ಅಲ್ಲಿದ್ದ ವೈದ್ಯಕೀಯ ಪರಿಕರಗಳು ಸುಟ್ಟು ಕರಕಲಾಗಿವೆ. 8 ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸುತ್ತಿವೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
ಓಲ್ಡ್ ಒಪಿಡಿಯ ಎರಡನೇ ಮಹಡಿಯಲ್ಲಿರುವ ತುರ್ತು ಚಿಕಿತ್ಸಾ ವಿಭಾಗದ ಮೇಲಿರುವ ಎಂಡೋಸ್ಕೋಪಿ ಕೊಠಡಿಯಲ್ಲಿ ಇಂದು ಬೆಳಗ್ಗೆ 11.50 ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕೊಠಡಿಯಲ್ಲಿದ್ದ ಎಲ್ಲಾ ರೋಗಿಗಳನ್ನು ಸ್ಥಳಾಂತರಿಸಲಾಗಿದೆ. ಬೆಂಕಿಗೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಅಗ್ನಿಯನ್ನು ನಂದಿಸುವ ಕಾರ್ಯ ನಡೆಯುತ್ತಿದೆ. ಕೆಲವೆಡೆ ಅಗ್ನಿಯನ್ನು ನಂದಿಸಲಾಗಿದೆ. ದಟ್ಟ ಹೊಗೆ ಆವರಿಸಿಕೊಂಡಿದೆ ಎಂದು ಏಮ್ಸ್ ಅಧಿಕಾರಿಗಳು ತಿಳಿಸಿದರು.
ಬೆಂಕಿ ಅನಾಹುತ ವಿಷಯ ತಿಳಿದ ತಕ್ಷಣ ಏಮ್ಸ್ಗೆ 8 ಅಗ್ನಿಶಾಮಕ ವಾಹನಗಳು ಧಾವಿಸಿ ಕಾರ್ಯಾಚರಣೆ ನಡೆಸುತ್ತಿವೆ. ಕಟ್ಟಡದ ಎರಡನೇ ಮಹಡಿಯಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿದೆ.
ಇದನ್ನೂ ಓದಿ: ಆಲಮಟ್ಟಿ ಜಲಾಶಯ ಭರ್ತಿಗೆ ಕ್ಷಣಗಣನೆ : ಅಧಿಕ ಮಾಸದ ಹಿನ್ನೆಲೆ ಬಾಗಿನ ಅರ್ಪಣೆ ವಿಳಂಬ?