ಎರಡು ಟ್ರಕ್ಗಳ ನಡುವೆ ಮುಖಾಮುಖಿ ಡಿಕ್ಕಿ.. ಡ್ರೈವರ್, ಕ್ಲೀನರ್ ಸಜೀವದಹನ
🎬 Watch Now: Feature Video
ಸಿರೋಹಿ: ಎರಡು ಟ್ರಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಸಜೀವದಹನವಾಗಿರುವ ಘಟನೆ ನಿನ್ನೆ ರಾತ್ರಿ ರಾಜಸ್ಥಾನದ ಸಿರೋಹಿ ಜಿಲ್ಲೆಯ ದೆಹಲಿ- ಕಾಂಡ್ಲಾ ಹೆದ್ದಾರಿಯಲ್ಲಿ ನಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಡ್ರೈವರ್ ಮತ್ತು ಕ್ಲೀನರ್ ಸಜೀವದಹನ ವಾಗಿದ್ದಾರೆ. ಮೃತರನ್ನು ರಾಜಸ್ಥಾನದ ಭರತ್‌ಪುರ ಜಿಲ್ಲೆಯ ನಿವಾಸಿಗಳು ಎಂದು ಗುರುತಿಸಲಾಗಿದೆ. ಸದ್ಯ ಮೃತ ದೇಹಗಳನ್ನು ಶವಾಗಾರದಲ್ಲಿ ಇರಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸದರ್ ಪೊಲೀಸ್ ಠಾಣೆಯ ಎಎಸ್‌ಐ ಸಿಂಗ್, ಭಾನುವಾರ ತಡರಾತ್ರಿ ರೇವ್‌ದಾರ್‌ನಿಂದ ಕೃಷ್ಣಗಂಜ್ಗೆ ಬರುತ್ತಿದ್ದ ಕಲ್ಲಿದ್ದಲು ತುಂಬಿದ ಟ್ರಕ್ ಮತ್ತು ಸಿರೋಹಿಯಿಂದ ರೇವ್‌ದಾರ್ ಕಡೆಗೆ ಹೋಗುತ್ತಿದ್ದ ಟ್ರಕ್ ನಡುವೆ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಎರಡು ಟ್ರಕ್ಗಳ ನಡುವಿನ ಡಿಕ್ಕಿಯ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಸಿರೋಹಿಯಿಂದ ರೇವ್‌ದಾರ್ ಕಡೆ ಹೊರಟಿದ್ದ ಲಾರಿಯ ಚಾಲಕ ಮತ್ತು ಕ್ಲೀನರ್ ಹೊರಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಲ್ಲಿದ್ದಲು ತುಂಬಿದ ಟ್ರಕ್ ಚಾಲಕ ಮತ್ತು ಕ್ಲೀನರ್ ಒಳಗೆ ಸಿಲುಕಿಕೊಂಡು ಸಜೀವದಹನವಾಗಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಠಾಣಾಧಿಕಾರಿ ಸಹದೇವ್ ಚೌಧರಿ ಅವರು ಕೂಡಲೇ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಕಲ್ಲಿದ್ದಲು ತುಂಬಿದ್ದರಿಂದ ಬೆಂಕಿ ವ್ಯಾಪಕವಾಗಿ ಆವರಿಸಿದ್ದು, ಎರಡು ಗಂಟೆಗಳ ನಿರಂತರ ಕಾರ್ಯಾಚರಣೆಯಿಂದ ನಂದಿಸಲಾಯಿತು. ಅಷ್ಟರಲ್ಲಾಗಲೇ ಎರಡೂ ಟ್ರಕ್ಗಳು ಸುಟ್ಟು ಭಸ್ಮವಾಗಿವೆ. ಜತೆಗೆ ಇಬ್ಬರು ಸಜೀವದಹನವಾಗಿದ್ದಾರೆ ಎಂದು ಹೇಳಿದರು.
ಸಜೀವ ದಹನವಾಗಿರುವ ಚಾಲಕ ಮತ್ತು ಸಹಾಯಕರನ್ನು ಪೊಲೀಸರು ಗುರುತಿಸಿದ್ದಾರೆ. ಮೃತರ ಹೆಸರು ಇರ್ಫಾನ್ ಮೊಹಮ್ಮದ್ ಮತ್ತು ಇರ್ಸಾಫ್ ಎಂದು ತಿಳಿದು ಬಂದಿದೆ. ಬಳಿಕ ಎರಡು ಜೆಸಿಬಿ ಯಂತ್ರಗಳಿಂದ ವಾಹನಗಳುನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಲಾರಿ ಡಿಕ್ಕಿಯಾಗಿ ನೆಲಕ್ಕುರುಳಿದ ಅಂಡರ್‌ಪಾಸ್ ತಡೆಗಂಬ- ವಿಡಿಯೋ