ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಪ್ಲಾಸ್ಟಿಕ್ ಗೋದಾಮು - Etv Bharat Kannada
🎬 Watch Now: Feature Video

ಆನೇಕಲ್: ಶಾರ್ಟ್ ಸರ್ಕ್ಯೂಟ್ ನಿಂದ ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ ಬಿದ್ದಿರುವ ಘಟನೆ ಆನೇಕಲ್ ನ ಆದೂರು ಬಳಿ ನಡೆದಿದೆ. ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ ಹೊತ್ತಿಕೊಂಡು ಅವಾಂತರ ಸೃಷ್ಟಿಯಾಗಿದೆ. ಪ್ಲಾಸ್ಟಿಕ್ ಹಾಗೂ ಪೋಮ್ ಶೇಖರಣೆ ಮಾಡಿದ್ದ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಹೊತ್ತಿ ಉರಿದಿದೆ. ಇನ್ನೂ 15ಕ್ಕೂ ಹೆಚ್ಚು ಜನರು ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು. ಊಟದ ಸಮಯ ಆಗಿದ್ದರಿಂದ ಕಾರ್ಮಿಕರು ಹೊರ ಹೋಗಿದ್ದರು. ಈ ವೇಳೆ, ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಬಿದ್ದಿದೆ ಎನ್ನಲಾಗಿದ್ದು, ಗೋದಾಮಿನಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಎರಡು ಅಗ್ನಿಶಾಮಕ ವಾಹಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಲಾಗಿದೆ. ಬೆಂಕಿಯ ಕೆನ್ನಾಲಿಗೆ ಹತೋಟಿಗೆ ತರಲು ಅಗ್ನಿಶಾಮಕದಳ ಹರಸಹಾಸ ಪಟ್ಟಿದ್ದಾರೆ. ಬಾಬು ಎಂಬುವವರಿಗೆ ಸೇರಿದ್ದ ಗೋದಾಮು ಇದಾಗಿದ್ದು, ಪ್ಲಾಸ್ಟಿಕ್ ಕರಗಿಸುತ್ತಿದ್ದ ಮಷಿನರಿಗಳು ಬೆಂಕಿಗೆ ಆಹುತಿಯಾಗಿವೆ. ಹಳೆಯ ಪ್ಲಾಸ್ಟಿಕ್ ಕರಗಿಸಿ ಮತ್ತೆ ಪ್ಲಾಸ್ಟಿಕ್ ತಯಾರು ಮಾಡುತ್ತಿದ್ದ ಕಾರ್ಖಾನೆ ಇದಾಗಿದೆ. ಇನ್ನೂ ಬೆಂಕಿಯಿಂದ ಆದೂರು ಸುತ್ತ ದಟ್ಟ ಹೊಗೆ ಆವರಿಸಿದೆ.
ಇದನ್ನೂ ಓದಿ: ಗುಜರಿ ಅಂಗಡಿಗೆ ಆಕಸ್ಮಿಕ ಬೆಂಕಿ : ಲಕ್ಷಾಂತರ ರೂ ಮೌಲ್ಯದ ಸಾಮಗ್ರಿ ಭಸ್ಮ