'ಕಾಶ್ಮೀರಕ್ಕೆ ಪ್ರೇಮ ಪತ್ರ': ಶ್ರೀನಗರದಲ್ಲಿ ನಡೆದ ಫ್ಯಾಶನ್ ಶೋ.. ಹುಮಾ ಖುರೇಷಿ ರ‍್ಯಾಂಪ್ ವಾಕ್ ನೋಡಿ - ಲಲಿತ ಗ್ರ್ಯಾಂಡ್ ಪ್ಯಾಲೇಸ್
🎬 Watch Now: Feature Video
Published : Sep 14, 2023, 12:18 PM IST
ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಮಹಾರಾಜ ಪ್ರತಾಪ್ ಸಿಂಗ್ ಅವರ ಬೇಸಿಗೆ ನಿವಾಸವಾಗಿದ್ದ ದಾಲ್ ಸರೋವರದ ಮೇಲಿರುವ ಶ್ರೀನಗರದ ಐತಿಹಾಸಿಕ ಹೆಗ್ಗುರುತಾಗಿರುವ ಲಲಿತ ಗ್ರ್ಯಾಂಡ್ ಪ್ಯಾಲೇಸ್ ಬುಧವಾರ ಫ್ಯಾಶನ್ ಶೋಗೆ ಸಾಕ್ಷಿಯಾಯಿತು. ‘ಎ ಲವ್ ಲೆಟರ್ ಟು ಕಾಶ್ಮೀರ್’ ಶೀರ್ಷಿಕೆಯಡಿ FICCI FLO ಸಹಯೋಗದಲ್ಲಿ ಖ್ಯಾತ ವಸ್ತ್ರ ವಿನ್ಯಾಸಕ ವರುಣ್ ಬಾಹ್ಲ್ ಅವರು ಶ್ರೀನಗರದಲ್ಲಿ ನಡೆಸಿದ ಈ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಭಾರತೀಯ ಉಡುಗೆಯ ಸುಂದರ ಶೈಲಿಯನ್ನು ಪ್ರಸ್ತುತಪಡಿಸಲಾಯಿತು.
ಫ್ಯಾಷನ್ ಶೋ ಅಂಗವಾಗಿ ಲಲಿತ್ ಗ್ರ್ಯಾಂಡ್ ಪ್ಯಾಲೇಸ್ನ ಹುಲ್ಲುಹಾಸುಗಳನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಈ ಸಂದರ್ಭದಲ್ಲಿ ನಟಿ ಹುಮಾ ಖುರೇಷಿ ಮತ್ತು ನಟ ಸಾಕಿಬ್ ಸಲೀಂ ರ‍್ಯಾಂಪ್ ವಾಕ್ ಮಾಡಿ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು.
ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡ ವರುಣ್ ಬಹ್ಲ್, "ಕಾಶ್ಮೀರ ಕಣಿವೆಯ ನಿವಾಸಿಯಾಗಿ ನನ್ನ ತವರಿಗೆ ಮರಳಬೇಕು ಎಂದು ಭಾವಿಸಿದೆ. ನನ್ನ ತಂದೆ ಇಲ್ಲಿಯೇ ಬೆಳೆದವರು. ನಾನು ಹದಿಹರೆಯದಲ್ಲಿ ಕಾಶ್ಮೀರವನ್ನು ತುಂಬಾ ಪ್ರೀತಿಸುತ್ತಿದ್ದೆ. ಏಕೆಂದರೆ, ಅಲ್ಲಿ ಹೆಚ್ಚು ಸಮಯ ಕಳೆದಿದ್ದೇನೆ. ದಾಲ್ ಸರೋವರದಲ್ಲಿ ಆಟವಾಡುವಾಗ ಅದ್ಭುತ ಭೂಪ್ರದೇಶದ ಪ್ರತಿ ಇಂಚು ಇಂಚನ್ನು ಅನ್ವೇಷಿಸಿದ್ದೇನೆ. ಕಾಶ್ಮೀರದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಮತ್ತು ನನ್ನ ತಂದೆಗೆ ಗೌರವ ಸಲ್ಲಿಸಲು ನನಗೆ ಈ ಅವಕಾಶ ಸಿಕ್ಕಿರುವುದು ಸಂತಸ ನೀಡಿದೆ" ಎಂದು ಹೇಳಿದರು.
ಇದನ್ನೂ ಓದಿ : Victoria's Secret NYFW event : ಹಾಟ್ ಲುಕ್ನಲ್ಲಿ ಕಾಣಿಸಿಕೊಂಡ ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ