ಹೆಚ್‌ಡಿಕೆ ಸಿಎಂ ಆಗಲೆಂದು ಶಬರಿಮಲೆಗೆ ಪಾದಯಾತ್ರೆ.. ಹರಕೆ ಕಟ್ಟಿಕೊಂಡ ಅಭಿಮಾನಿಗಳು - HD Kumaraswamy
🎬 Watch Now: Feature Video

ರಾಮನಗರ: ಹೆಚ್‌ಡಿ ಕುಮಾರಸ್ವಾಮಿ ಮತ್ತೆ ಸಿಎಂ ಆಗಲೆಂದು ಎಂದು ಶಬರಿಮಲೆಗೆ ಅಭಿಮಾನಿಗಳು ಪಾದಯಾತ್ರೆ ಕೈಗೊಂಡರು. ಕನಕಪುರದಿಂದ ಶಬರಿಮಲೆಗೆ ಪಾದಯಾತ್ರೆ ಕೈಗೊಂಡಿದ್ದ ಅಭಿಮಾನಿಗಳು, ಮಾಜಿ ಸಿಎಂ ಹೆಚ್‌ಡಿಕೆ ಭಾವಚಿತ್ರ ಹಿಡಿದು ಪಾದಯಾತ್ರೆಗೆ ತೆರಳಿದ್ದಾರೆ. ಶಬರಿಮಲೆಯಲ್ಲಿ ಹೆಚ್‌ಡಿಕೆ ಭಾವಚಿತ್ರ ಹಿಡಿದು ಜೈಕಾರ ಕೂಗಿದ ಅಭಿಮಾನಿಗಳು ಮತ್ತೆ ಮುಖ್ಯಮಂತ್ರಿಯಾಗಲೆಂದು ಹರಕೆ ಕಟ್ಟಿಕೊಂಡಿದ್ದಾರೆ. ಕುಮಾರಣ್ಣ ವ್ಯಕ್ತಿತ್ವ, ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಭಿಮಾನಿಗಳು ಜೆಡಿಎಸ್ ಪಕ್ಷ ಸ್ಪಷ್ಟ ಬಹುಮತಗಳಿಸಿ ಅಧಿಕಾರಕ್ಕೆ ಬರಲೆಂದು ಹರಕೆ ಕಟ್ಟಿಕೊಂಡಿದ್ದಾರೆ.
Last Updated : Feb 3, 2023, 8:34 PM IST