ವ್ಯಕ್ತಿಯೊಬ್ಬರ ಕೈಯಲ್ಲಿನ ಉಂಗುರ ದೋಚಿ ಪರಾರಿಯಾದ ನಕಲಿ ನಾಗಾಸಾಧುಗಳು: ವಿಡಿಯೋ
🎬 Watch Now: Feature Video
ತುಮಕೂರು: ನಾಗಾಸಾಧುಗಳ ಸೋಗಿನಲ್ಲಿ ಬಂದು ಸಿನಿಮೀಯ ರೀತಿಯಲ್ಲಿ ಫೋಟೋ ಸ್ಟುಡಿಯೋ ಮಾಲೀಕರೊಬ್ಬರಿಗೆ ಮಂಕು ಬೂದಿ ಎರಚಿ ಚಿನ್ನದ ಉಂಗುರ ದೋಚಿ ಪರಾರಿಯಾಗಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ. ಕಮಂಡಲ ಹಿಡಿದು ಕಾವಿಧಾರಿಗಳಾಗಿ ಬಂದಿದ್ದ ನಕಲಿ ನಾಗಾಸಾಧುಗಳು ಸ್ಟುಡಿಯೋ ಮಾಲೀಕನಿಗೆ ಕೈಯಲ್ಲಿ ರುದ್ರಾಕ್ಷಿ ಕೊಟ್ಟು ಧ್ಯಾನ ಮಾಡುವಂತೆ ಹೇಳಿ ಆತನ ಉಂಗುರ ಕದ್ದು ಪರಾರಿಯಾಗಿದ್ದಾರೆ.
ತುಮಕೂರು ನಗರದ ಎಂ.ಜಿ ರಸ್ತೆಯಲ್ಲಿರುವ ಮಲ್ನಾಡ್ ಸ್ಟುಡಿಯೋ ಮಾಲೀಕ ಚಂದ್ರುವಿನ ಕೈಯಲ್ಲಿ ರುದ್ರಾಕ್ಷಿ ಇಟ್ಟು ಎರಡೂ ಕೈಯನ್ನು ಬಲವಾಗಿ ಹಿಡಿದು ಮಂತ್ರ ಹೇಳಿದ್ದಾರೆ. ಮಂತ್ರ ಹೇಳಿಸುವ ನೆಪದಲ್ಲಿ ಬೆರಳಲ್ಲಿದ್ದ ಉಂಗುರ ಲಪಟಾಯಿಸಿದ್ದು, ಬಳಿಕ ಎರಡು ನಿಮಿಷ ಧ್ಯಾನ ಮಾಡಿ ಎಂದು ಹೇಳಿ ನಿಧಾನವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ನಂತರ ಸ್ಟುಡಿಯೋ ಮಾಲೀಕ ಧ್ಯಾನದಿಂದ ಹೊರಬಂದು ನೋಡಿದಾಗ ಬಲಗೈಯಲ್ಲಿದ್ದ ಉಂಗುರ ದೋಚಿಕೊಂಡು ಹೋಗಿರುವುದು ಚಂದ್ರು ಗಮನಕ್ಕೆ ಬಂದಿದೆ. ಕೂಡಲೇ ಈ ಸಂಬಂಧ ಸ್ಟುಡಿಯೋ ಮಾಲೀಕ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೂವರು ನಾಗಸಾಧು ವೇಷದಲ್ಲಿ ತಿರುಗಾಡುತ್ತಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Monsoon: ದೊಡ್ಡಬಳ್ಳಾಪುರದಲ್ಲಿ ಮಳೆಗಾಗಿ 'ಚಂದಮಾಮ ಮದುವೆ' ಮಾಡಿಸಿದ ಗ್ರಾಮಸ್ಥರು: ವಿಡಿಯೋ