ಅವಧಿ ಮುಗಿದ ₹13 ಕೋಟಿ ಮೌಲ್ಯದ ಮದ್ಯ ರೋಡ್ ರೋಲರ್ ಹತ್ತಿಸಿ ನಾಶ: ವಿಡಿಯೋ - 13 ಕೋಟಿ ಮೌಲ್ಯದ ಮದ್ಯ ನಾಶ
🎬 Watch Now: Feature Video
ಗಾಜಿಯಾಬಾದ್: ಉತ್ತರಪ್ರದೇಶದಲ್ಲಿ ಅವಧಿ ಮೀರಿದ ಮದ್ಯ ಮಾರಾಟ ಆರೋಪ ಕೇಳಿಬಂದಿದ್ದು, ದಾಳಿ ಮಾಡಿದ ಪೊಲೀಸರು ತಕ್ಕ ಕ್ರಮ ಕೈಗೊಂಡಿದ್ದಾರೆ. ಗಾಜಿಯಾಬಾದ್‌ನಲ್ಲಿ ಸುಮಾರು 13 ಕೋಟಿ ರೂಪಾಯಿ ಮೌಲ್ಯದ ಅವಧಿ ಮೀರಿದ ಮದ್ಯದ ಬಾಟಲಿಗಳನ್ನು ಅಬಕಾರಿ ಇಲಾಖೆ ವಶಪಡಿಸಿಕೊಂಡು, ರೋಡ್ ರೋಲರ್ ಮೂಲಕ ನಾಶಪಡಿಸಿದೆ.
ಕೋಟ್ಯಂತರ ರೂಪಾಯಿ ಮೌಲ್ಯದ ಮದ್ಯವನ್ನು ಗೋದಾಮಿನಲ್ಲಿ ಶೇಖರಣೆ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಅಬಕಾರಿ ಇಲಾಖೆ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಅದರಲ್ಲಿ ಸುಮಾರು 13 ಕೋಟಿ ರೂಪಾಯಿ ಮೌಲ್ಯದ ಮದ್ಯ ಅವಧಿ ಮುಗಿದಿರುವುದು ಪತ್ತೆಯಾಗಿದೆ. ಬಳಿಕ ಅದನ್ನು ಗೋದಾಮಿನ ಹೊರಭಾಗದಲ್ಲೇ ಬಿಸಾಡಿ, ರೋಡ್ ರೋಲರ್ ಮೂಲಕ ಅದನ್ನು ಹತ್ತಿಸಿ ನಾಶ ಮಾಡಿದ್ದಾರೆ.
ಇತ್ತೀಚೆಗೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 5.47 ಕೋಟಿ ರೂಪಾಯಿ ಮೌಲ್ಯದ ಮದ್ಯದ ಬಾಟಲಿಗಳನ್ನು ವಿಜಯವಾಡ ಪೊಲೀಸರು ರೋಡ್ ರೋಲರ್ ಹರಿಸಿ ನಾಶಪಡಿಸಿದ್ದರು. ತೆಲಂಗಾಣದಿಂದ ಅಕ್ರಮವಾಗಿ ಸಾಗಿಸುತ್ತಿದ್ದಾಗ 2.43 ಲಕ್ಷ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಈ ಹಿಂದೆಯೂ ಕೂಡ 2 ಕೋಟಿ ರೂ. ಮೌಲ್ಯದ ಮದ್ಯವನ್ನು ಇದೇ ರೀತಿ ಪೊಲೀಸರು ನಾಶಪಡಿಸಿ ಅಕ್ರಮ ಮದ್ಯ ಸಾಗಾಟದ ವಿರುದ್ಧ ಸಮರ ಸಾರಿದ್ದರು.
ಇದನ್ನೂ ಓದಿ: ಹಳೆಯ ಮನೆಯಲ್ಲಿ 50ಕ್ಕೂ ಹೆಚ್ಚು ಹಾವಿನ ಮರಿಗಳು ಪತ್ತೆ: 24 ಸರ್ಪಗಳನ್ನ ಸಾಯಿಸಿದ ಗ್ರಾಮಸ್ಥರು, 30 ಹಾವುಗಳ ರಕ್ಷಣೆ... ವಿಡಿಯೋ