ಹಲವು ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ ಮದ್ಯ ನಾಶಪಡಿಸಿದ ಅಬಕಾರಿ ಇಲಾಖೆ
🎬 Watch Now: Feature Video
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹಲವು ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮದ್ಯವನ್ನು ಅಬಕಾರಿ ಇಲಾಖೆಯ ಸಿಬ್ಬಂದಿ ಇಂದು ನಾಶಪಡಿಸಿದರು. ಅಬಕಾರಿ ಉಪ ಆಯುಕ್ತರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಆದೇಶದಂತೆ ದೊಡ್ಡಬಳ್ಳಾಪುರ ವಲಯ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಲ್ಲಿ ಮದ್ಯ ವಶಪಡಿಸಿಕೊಂಡು ಮುಟ್ಟುಗೋಲು ಹಾಕಿಕೊಂಡಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಉಪ ಆಯುಕ್ತರ ಆದೇಶದಂತೆ ಇಂದು ಮದ್ಯವನ್ನು ನಾಶಪಡಿಸಲಾಗಿದೆ. ತಾಲೂಕಿನ ಬಾಶೆಟ್ಟಿಹಳ್ಳಿಯಲ್ಲಿರುವ ಕೆಎಸ್ಬಿಸಿಎಲ್ ಡಿಪೋ ದೊಡ್ಡಬಳ್ಳಾಪುರ ಶಾಖೆ ಅವರಣದಲ್ಲಿ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಮದ್ಯವನ್ನು ನಾಶಪಡಿಸಿದರು.
ಸುಮಾರು 92.285 ಲೀಟರ್ ಮದ್ಯ, 30 ಲೀಟರ್ ವೈನ್, 48.330 ಲೀಟರ್ ಬಿಯರ್, 9 ಲೀಟರ್ ಸೇಂದಿ ನಾಶಪಡಿಸಲಾಗಿದೆ. ಈ ಸಮಯದಲ್ಲಿ ಅಬಕಾರಿ ಉಪ ಆಯುಕ್ತರಾದ ನಾಗೇಶ್ ಕುಮಾರ್ ಡಿ, ತಾಲೂಕು ದಂಡಧಿಕಾರಿಗಳಾದ ಮೋಹನ್ ಕುಮಾರಿ, ಅಬಕಾರಿ ಉಪ ಅಧೀಕ್ಷಕರಾದ ಪರಮೇಶ್ವರಪ್ಪ, ಅಬಕಾರಿ ನಿರೀಕ್ಷಕರಾದ ಎಸ್.ಎಂ. ಪಾಟೀಲ್, KSBCL ಡಿಪೋ ಅಬಕಾರಿ ನಿರೀಕ್ಷಕರು, ಮ್ಯಾನೇಜರ್ ಸಿಬ್ಬಂದಿಗಳಾದ ಹನುಮಂತರಾಜು, ರಾಜಶೇಖರ್ ಜಿಆರ್, ಮಂಜುನಾಥ್ ಮೆಡ್ಲೇರಿ, ಮುನಿರಾಜು ಎಂ ಹಾಜರಿದ್ದರು.
ಇದನ್ನೂ ಓದಿ: ಸಿನಿಮೀಯ ರೀತಿ ಮದ್ಯ ಲೂಟಿ ಹೊಡೆದ 10 ಮಂದಿ ಬಂಧನ