ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ - ಎರಿಕ್ ಗಾರ್ಸೆಟ್ಟಿ ಯಾರು

🎬 Watch Now: Feature Video

thumbnail

By

Published : May 15, 2023, 1:15 PM IST

ಗುಜರಾತ್ : ಭಾರತದಲ್ಲಿನ ಅಮೆರಿಕದ  ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಇಂದು ಅಹಮದಾಬಾದ್​ನಲ್ಲಿರುವ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ, ಭಾರತದ ಪಿತಾಮಹನ ದರ್ಶನ ಪಡೆದರು. ಲಾಸ್ ಏಂಜಲೀಸ್‌ನ ಮಾಜಿ ಮೇಯರ್ ಎರಿಕ್ ಗಾರ್ಸೆಟ್ಟಿ ಅವರು ಭಾರತಕ್ಕೆ ಅಮೆರಿಕದ ಹೊಸ ರಾಯಭಾರಿಯಾಗಿ  ಕಳೆದ ಮಾರ್ಚ್​ ತಿಂಗಳಿನಲ್ಲಿ ನೇಮಕಗೊಂಡಿದ್ದಾರೆ. ಇವರು ಸುಮಾರು ಐದು ವರ್ಷಗಳ ಹಿಂದೆ ಡೆಮಾಕ್ರಟಿಕ್ ಪಕ್ಷದ   ಸದಸ್ಯರಾಗಿ ಹೊರಹೊಮ್ಮಿದ್ದರು.

ಎರಿಕ್ ಗಾರ್ಸೆಟ್ಟಿ ಯಾರು? : 52 ವರ್ಷದ ಎರಿಕ್ ಗಾರ್ಸೆಟ್ಟಿ, ಸ್ಯಾನ್ ಫೆರ್ನಾಂಡೋ ವ್ಯಾಲಿಯಲ್ಲಿ ಬೆಳೆದವರು, ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಎಂಎ ಪದವಿ ಪಡೆದುಕೊಂಡಿದ್ದಾರೆ. ಜೊತೆಗೆ, ಆಕ್ಸ್‌ಫರ್ಡ್ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ವ್ಯಾಸಂಗ ಮಾಡಿದ್ದಾರೆ. ಮತ್ತು ಆಕ್ಸಿಡೆಂಟಲ್ ಕಾಲೇಜು ಮತ್ತು ಯುಎಸ್‌ಸಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಅಪಾರ ಅನುಭವವನ್ನು ಗಳಿಸಿಕೊಂಡಿದ್ದಾರೆ.  ಜೊತೆಗೆ,  12 ವರ್ಷಗಳ ಕಾಲ  ಅಮೆರಿಕದ ನೌಕಾ ದಳದ ಮೀಸಲು ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವವೂ ಇವರಿಗೆ ಇದೆ. 

ಇದನ್ನೂ ಓದಿ : ಅಮೆರಿಕ ಪೌರತ್ವ ಮಸೂದೆ 2023 ಮಂಡನೆ : ಗ್ರೀನ್‌ ಕಾರ್ಡ್‌ ಮಿತಿ ರದ್ದಾಗುವ ಸಾಧ್ಯತೆ?

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.