ನಾಡಿನಲ್ಲಿ ಚುನಾವಣಾ ಮತಯುದ್ಧ: ಬಂಡೀಪುರ ಕಾಡಲ್ಲಿ ಮದಗಜಗಳ ಕಾದಾಟ - Elephants fight in Bandipur forest
🎬 Watch Now: Feature Video
ಚಾಮರಾಜನಗರ: ನಾಡಿನಲ್ಲಿ ಚುನಾವಣಾ ಮತಯುದ್ಧ ದಿನೇ ದಿನೆ ಹೆಚ್ಚುತ್ತಿದ್ದರೇ ಕಾಡಲ್ಲಿ ಮದಗಜಗಳು ನೀನಾ-ನಾನಾ ಎಂಬಂತೆ ಕಾದಾಡಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ರಾಮಾಪುರ ಕಳ್ಳಬೇಟೆ ತಡೆ ಶಿಬಿರ ಬಳಿ ನಡೆದಿದೆ.
ಬಂಡೀಪುರದ ಕಾಡಲ್ಲಿ ನಡೆದುಕೊಂಡು ಹೋಗುತ್ತಿದ್ದ ಎರಡು ಆನೆಗಳು ಮುಖಾಮುಖಿಯಾಗಿದ್ದು, ಒಂದನ್ನೊಂದು ನೋಡುತ್ತಿದ್ದಂತೆ ಕೋಪಗೊಂಡು ಎರಡೂ ಗುದ್ದಾಟ ಪ್ರಾರಂಭಿಸಿವೆ. ಬಲಶಾಲಿಯಾಗಿರುವ ಎರಡೂ ಆನೆಗಳು ತಾವೇನೂ ಕಮ್ಮಿ ಇಲ್ಲ ಎನ್ನುವಂತೆ ಒಂದನ್ನೊಂದು ಹಿಂದಕ್ಕೆ ತಳ್ಳುತ್ತಾ ಸಾಗಿದೆ. ಎರಡು ಮದಗಜಗಳು ಗುದ್ದಾಡಿಕೊಳ್ಳುವ ವಿಡಿಯೋವನ್ನು ಅದೇ ವೇಳೆ ಅಲ್ಲಿ ಹೋಗುತ್ತಿದ್ದ ಅರಣ್ಯ ಸಿಬ್ಬಂದಿ ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಸೆರೆ ಹಿಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ಎರಡು ಆನೆಗಳು ಫೈಟ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವೈರಲ್ ಆದ ವಿಡಿಯೋವನ್ನು ನೋಡಿದ ನೆಟ್ಟಿಗರು ಹೌಹಾರಿದ್ದಾರೆ. ನೀಳದಂತದ ಎರಡು ಆನೆಗಳು ಭೂಮಿಯೇ ಕಂಪಿಸುವಂತೆ ಗುದ್ದಾಡಿಕೊಂಡಿದ್ದು ನೆಟ್ಟಿಗರನ್ನು ರೋಮಾಂಚನಗೊಳಿಸಿದೆ.
ಇದನ್ನೂ ಓದಿ: ಬಾಯಾರಿಕೆ.. ದೇವಸ್ಥಾನದಲ್ಲಿ ಕೈ ಪಂಪ್ ಒತ್ತಿ ನೀರು ಕುಡಿದ ಕಾಡಾನೆ: ವೈರಲ್ ವಿಡಿಯೋ