ಮದ್ಯದ ಅಮಲಿನಲ್ಲಿ ಆನೆಯ ದೃಶ್ಯ ಸೆರೆ ಹಿಡಿದ ಯುವಕ: ವಿಡಿಯೋ - ಮದ್ಯದ ಅಮಲಿನಲ್ಲಿದ್ದ ಯುವಕ

🎬 Watch Now: Feature Video

thumbnail

By

Published : Nov 15, 2022, 10:47 PM IST

Updated : Feb 3, 2023, 8:32 PM IST

ಹರಿದ್ವಾರ: ಇಲ್ಲಿನ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದಿಂದ ಜಗಜಿತ್‌ಪುರ ಪ್ರದೇಶದಲ್ಲಿನ ಕಬ್ಬು ತಿನ್ನಲು ಬಂದಿದ್ದ ಆನೆಗಳ ಹಿಂದೆ ಓಡಿ ಹೋಗಿ ಯುವಕನೊಬ್ಬ ವಿಡಿಯೋ ಚಿತ್ರೀಕರಿಸಿದ್ದಾನೆ. ಸೋಮವಾರ ರಾತ್ರಿ ಮದ್ಯದ ಅಮಲಿನಲ್ಲಿದ್ದ ಯುವಕ ಮೊಬೈಲ್​ನಲ್ಲಿ ಆನೆಗಳನ್ನು ಚಿತ್ರೀಕರಿಸುವ ಸಲುವಾಗಿ ಅವುಗಳ ಹಿಂದೆ ಪ್ರಾಣವನ್ನು ಲೆಕ್ಕಿಸದೇ ಓಡಿದ್ದಾನೆ. ಇದನ್ನು ಗಮನಿಸಿದ ಆನೆಗಳು ತುಸು ದೂರ ಸಾಗುತ್ತಲೇ ತಿರುಗಿ ನಿಂತಿದೆ. ಇದನ್ನು ಕಂಡು ಯುವಕ ಭಯಭೀತಗೊಂಡಿದ್ದಾನೆ. ಆದರೂ ಯುವಕ ದೃಶ್ಯಗಳನ್ನು ಮೊಬೈಲ್​​ನಲ್ಲಿ ಚಿತ್ರೀಸುತ್ತಲೇ ಆನೆಗಳನ್ನು ಪ್ರಚೋದಿಸಿದ್ದು, ಅದೃಷ್ಟವಶಾತ್​ ಆನೆಗಳು ಯುವಕನಿಗೆ ಯಾವುದೇ ತೊಂದರೆ ಮಾಡದೇ ಮುಂದೆ ಸಾಗಿವೆ. ಯುವಕ ಸೆರೆ ಹಿಡಿದ ಆನೆಗಳ ದೃಶ್ಯವು ವೈರಲ್​ ಆಗಿದೆ.
Last Updated : Feb 3, 2023, 8:32 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.